Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಊರಲ್ಲೇನೋ ವಿಶೇಷ

ಊರಲ್ಲೇನೋ ವಿಶೇಷ

ಧಾರಾವಾಹಿ-34

ವಾರ್ತಾಭಾರತಿವಾರ್ತಾಭಾರತಿ21 May 2017 12:03 AM IST
share
ಊರಲ್ಲೇನೋ ವಿಶೇಷ

ಅದೊಂದು ಬೆಳಗ್ಗೆ ಪಪ್ಪು ಅಂಗಳದಲ್ಲಿ ಕೆಲಸ ಮಾಡುತ್ತಿದ್ದಾಗ ಮೇಲಧಿಕಾರಿ ಬಂದವನೇ ಪಪ್ಪುವಿನ ಅಂಗಿ ಎಳೆದು, ಕೆನ್ನೆಗೆ ಛಟೀರ್ ಎಂದು ಬಾರಿಸಿದ. ‘‘ನನ್ನ ಹೆಂಡತಿಯ ಜೊತೆಗೆ ಅಗೌರವವಾಗಿ ನಡೆದುಕೊಳ್ಳುವಷ್ಟು ಧೈರ್ಯವೆ?’’ ಎಂದ.

ಪಪ್ಪುವಿಗೆ ಏನೂ ಅರ್ಥವಾಗಲಿಲ್ಲ. ಅವನಿಗೆ ತೀವ್ರ ಅವಮಾನವಾಗಿತ್ತು. ಅಳು ಉಕ್ಕಿ ಬಂತು. ಅಪ್ಪಯ್ಯನ ಮಾತು ಮತ್ತೊಮ್ಮೆ ನೆನಪಿಗೆ ಬಂತು. ಇದಾದ ಕೆಲವೇ ವಾರದಲ್ಲಿ ಅವನು ಗಡಿ ಭಾಗಕ್ಕೆ ವರ್ಗಾವಣೆಗೊಂಡ.

ಬಂಕರ್‌ಗಳಲ್ಲೇ ಹಲವು ತಿಂಗಳುಗಳನ್ನು ಕಳೆದ. ಬಂಕರ್‌ನೊಳಗಿರುವ ಕತ್ತಲಲ್ಲಿ ಅವನು ನೆಮ್ಮದಿಯಿಂದಿದ್ದ. ಅಲ್ಲಿಯ ಯಾವ ಕಷ್ಟಗಳೂ ಮೇಲಧಿಕಾರಿಯ ಮನೆಗೆಲಸಕ್ಕಿಂತ ಸುಲಭವಾದುದು ಎಂದೆನಿಸಿತು ಅವನಿಗೆ. ಆದರೂ ಅವನೊಳಗೆ ಪ್ರಶ್ನೆ ಮಾತ್ರ ಉಳಿದೇ ಇತ್ತು. ತಾನಿಲ್ಲಿ ಈ ಕತ್ತಲ ಕೂಪದಲ್ಲಿ ಯಾರಿಗಾಗಿ ಕಾಯುತ್ತಿದ್ದೇನೆ? ಎಲ್ಲವನ್ನೂ ತ್ಯಜಿಸಿ ಇಲ್ಲಿ ಕೋವಿ ಹಿಡಿದು ನಿಂತು ತಾನು ಗಳಿಸುತ್ತಿರುವುದೇನು?

ನಿಧಾನಕ್ಕೆ ವರ್ಷಗಳು ಉರುಳುತ್ತಿದ್ದವು. ಮನೆಯಿಂದ ಬರುವ ಪತ್ರಗಳಿಗೆ ಕೆಲವು ಸಾಲುಗಳ ಉತ್ತರಗಳನ್ನಷ್ಟೇ ಬರೆದು ಕಳುಹಿಸುತ್ತಿದ್ದ. ಜಾನಕಿಯನ್ನು ಮರೆಯಲು ಯತ್ನಿಸುತ್ತಿದ್ದ ಅಥವಾ ದಿನಗಳುರುಳಿದಂತೆ ಅವಳ ನೆನಪು ಸವೆಯತೊಡಗಿತ್ತು. ಇದು ಅವನ ನಿಜವಾದ ಗೆಲುವೇ ಆಗಿತ್ತು. ಎರಡು ವರ್ಷ ಕಳೆದರೂ ರಜೆಯಲ್ಲಿ ತೆರಳದೇ ಇದ್ದ ಪಪ್ಪುವನ್ನು ಹವಾಲ್ದಾರನೇ ಪ್ರಶ್ನಾರ್ಹವಾಗಿ ನೋಡುತ್ತಿದ್ದ. ಊರಿನ ನೆನಪಿನಿಂದ ಪಾರಾಗುವುದಕ್ಕಾಗಿಯೇ ಅವನು ತನ್ನ ಕೆಲಸವನ್ನು ಹೆಚ್ಚು ಹೆಚ್ಚು ನೆಚ್ಚಿಕೊಂಡ ಫಲವಾಗಿ, ಎರಡೂವರೆ ವರ್ಷಗಳೊಳಗಾಗಿ ಸುಬೇದಾರನಾಗಿ ಭಡ್ತಿ ಪಡೆದ. ತಂದೆಗೆ ಈ ಬಗ್ಗೆ ಪತ್ರದಲ್ಲಿ ಬರೆದು ತಿಳಿಸಿದ. ಗುರೂಜಿಗೂ ತಿಳಿಸಲೇ ಎಂದು ಒಮ್ಮೆ ಯೋಚಿಸಿದನಾದರೂ, ಬಳಿಕ ಅದನ್ನು ಕೈ ಬಿಟ್ಟ.

ಹೀಗಿರುವಾಗಲೇ ಊರಿನಿಂದ ಬಂದ ಒಂದು ಪತ್ರ ಅವನನ್ನು ಮತ್ತೆ ಹಳೆಯ ನೆನೆಪುಗಳ ಸುಳಿಗೆ ಸಿಲುಕಿಸಿತು. ಅದು ತಂದೆಯ ಪತ್ರ. ಆ ಪತ್ರದಲ್ಲಿ ಅವನ ಮನಸ್ಸನ್ನು ಅರಳುವಂತೆ ಮಾಡುವ ಎರಡು ಸಾಲುಗಳಿದ್ದವು ‘‘....ಮುಖ್ಯವಾಗಿ ಗುರೂಜಿಯವರು ನಿನ್ನನ್ನು ಸನ್ಮಾನಿಸುವುದಕ್ಕಾಗಿ ಪ್ರಾಥಮಿಕ ಶಾಲೆಯಲ್ಲಿ ಒಂದು ಸಮಾರಂಭವನ್ನು ಇಟ್ಟುಕೊಂಡಿದ್ದಾರೆ. ನೀನು ಬರಲೇಬೇಕು ಎಂದು ಅವರು ಕೋರಿದ್ದಾರೆ. ಹಾಗೆಯೇ ನಿನ್ನ ಮದುವೆಯನ್ನೂ ನಾವು ಈ ರಜೆಯಲ್ಲೇ ಮುಗಿಸಬೇಕು ಎಂದೂ ತೀರ್ಮಾನಿಸಿದ್ದೇವೆ...’’

ಪತ್ರದ ಈ ಸಾಲುಗಳು ಅವನನ್ನು ಮತ್ತೆ ರಜೆಗೆ ಅರ್ಜಿ ಹಾಕುವಂತೆ ಮಾಡಿತು. ಜಾನಕಿ ಅಮೆರಿಕದಿಂದ ಮರಳಿರಬಹುದು ಎಂದೆನಿಸಿತು ಪಪ್ಪುವಿಗೆ. ಗುರೂಜಿ ಮತ್ತು ಅಪ್ಪ ಇಬ್ಬರು ಜೊತೆ ಸೇರಿ ಸನ್ಮಾನ-ಮದುವೆ ಇತ್ಯಾದಿಗಳ ಯೋಜನೆ ಹಾಕಿದ್ದಾರೆ ಎಂದರೆ ಅದರಲ್ಲಿ ಬೇರೇನೋ ವಿಶೇಷವಿರಬೇಕು ಅನ್ನಿಸಿತು. ಜಾನಕಿಯ ಉಪಸ್ಥಿತಿಯಲ್ಲಿ ತನಗೆ ಸನ್ಮಾನವಾಗುವುದನ್ನು ನೆನೆದು ಅವನ ಮನಸ್ಸು ಮೊದಲ ಮಳೆ ಬಿದ್ದ ನೆಲದಂತಾಗಿತ್ತು. ಪಪ್ಪುವಿನ ರಜೆ ಅಂಗೀಕಾರವಾಗುವುದು ಕಷ್ಟವಾಗಲಿಲ್ಲ. ಸಹೋದ್ಯೋಗಿಗಳೆಲ್ಲರೂ ಅವನನ್ನು ಹುರಿದುಂಬಿಸಿ ಬೀಳ್ಕೊಟ್ಟರು.

ಹೊರಡುವ ದಿನ ಅಪ್ಪಯ್ಯನಂತೂ ಪಪ್ಪುವಿನ ಜೊತೆಗೆ ಹೇಳಿಯೇ ಬಿಟ್ಟ ‘‘ಜಾನಕಿಯೋ, ಇನ್ನೊಬ್ಬಳೋ. ಆದರೆ ಮದುವೆಯಂತೂ ಮುಗಿಸಿಯೇ ಬಾ....’’

ಪಪ್ಪು ತಲೆಯಾಡಿಸಿದ. ಹೊಸ ಭರವಸೆಯೊಂದಿಗೆ ಆತ ತನ್ನ ಟ್ರಂಕ್ ಜೊತೆಗೆ ರೈಲು ಗಾಡಿ ಹತ್ತಿದ.

***

ಉಪ್ಪಿನಂಗಡಿಯಲ್ಲಿ ಪಪ್ಪುವನ್ನು ಸ್ವೀಕರಿಸಲು ಅವನ ತಂದೆಯ ಜೊತೆಗೆ ಗುರೂಜಿಯೂ ಉಪ್ಪಿನಂಗಡಿಯ ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದರು. ಪಪ್ಪು ಮೊದಲು ಗುರೂಜಿಯ ಕಾಲಿಗೆ ನಮಸ್ಕರಿಸಿದ. ಬಳಿಕ ತಂದೆಯನ್ನು ಬಾಹುಗಳಲ್ಲಿ ತೆಗೆದುಕೊಂಡ.

‘‘ಈ ಮುದುಕರನ್ನೆಲ್ಲ ಮರೆತೇ ಬಿಟ್ಟೆ ಅಂತ ತಿಳಿದು ಕೊಂಡೆ’’ ಅನಂತ ಭಟ್ಟರು ಗದ್ಗದಿತರಾಗಿ ನುಡಿದರು.

‘‘ಕ್ಷಮಿಸಿ ಬಿಡಪ್ಪ’’ ಎಂದ ಪಪ್ಪು. ಅವನ ಕಣ್ಣಾಲಿಯೂ ತುಂಬಿತ್ತು.

‘‘ಪ್ರತಾಪ ಸಿಂಹ ಈ ದೇಶ ಕಾಯುವ ಯೋಧ. ಅವನು ಕಣ್ಣೊರೆಸುವವನಾಗಬೇಕೇ ಹೊರತು, ಕಣ್ಣೀರು ಹಾಕುವವನಾಗಬಾರದು’’ ಗುರೂಜಿ ಇಬ್ಬರ ಹೆಗಲ ಮೇಲೆ ಕೈಯಿಟ್ಟು ಹೇಳಿದರು.

ಪಪ್ಪು ಕಣ್ಣೊರೆಸಿ ಗುರೂಜಿಯೆಡೆ ನೋಡಿದ. ಅವರ ಮುಖದಲ್ಲಿ ವಯಸ್ಸು ತನ್ನ ಅಧಿಕಾರವನ್ನು ಸ್ಥಾಪಿಸಿತ್ತು. ಮುಖದ ಸುಕ್ಕುಗಳು ಹೆಚ್ಚಿದ್ದವು. ದೂರದಲ್ಲಿ ಗುರೂಜಿಯವರ ಕಾರು ನಿಂತಿತ್ತು. ಚಾಲಕ ಕಾರಿನ ಪಕ್ಕ ನಿಂತಿದ್ದ. ಮೂವರು ಕಾರನ್ನೇರಿದರು. ನೇರವಾಗಿ ಗುರೂಜಿಯ ಮನೆಯ ಕಡೆಗೆ ಕಾರು ದಾವಿಸಿತು. ಅಲ್ಲಿ ಪದ್ಮಮ್ಮ ಬಾಗಿಲಲ್ಲೇ ನಿಂತಿದ್ದರು.

‘‘ಬಾರೋ ಪಪ್ಪು...ಎಷ್ಟು ಸಮಯವಾಯಿತು ನಿನ್ನನ್ನು ನೋಡಿ. ಗುರುತು ಸಿಗದ ಹಾಗೆ ಬೆಳೆದು ಬಿಟ್ಟಿದ್ದೀಯ...’’ ಎನ್ನುತ್ತಾ ಅವರು ಸಂಭ್ರಮಿಸಿದರು. ಮನೆಯೊಳಗೆ ಪಪ್ಪುವಿನ ಕಣ್ಣು ಯಾರನ್ನೋ ಹುಡುಕುತ್ತಿತ್ತು. ಮನೆ ಯಾಕೋ ಬಣಬಣ ಅನ್ನಿಸಿತು. ಅಲ್ಲಿ ಸಣ್ಣದೊಂದು ಟೀ ಸಮಾರಾಧನೆಯಾದ ಬಳಿಕ ಅನಂತ ಭಟ್ಟರು ಮಗನ ಜೊತೆಗೆ ಮನೆಯ ಕಡೆಗೆ ನಡೆದರು.

ಮನೆ ಹತ್ತಿರವಾಗುತ್ತಿದ್ದಂತೆಯೇ ದೂರದಲ್ಲಿ ಮನೆಯ ಬೇಲಿಯ ಪಕ್ಕದಲ್ಲೇ ತಾಯಿ ತನ್ನನ್ನು ಎದುರು ನೋಡುತ್ತಿದ್ದಾರೆ...ಅಯ್ಯೋ ನನ್ನಮ್ಮ...ಹೇಗೆ ಸೊರಗಿ ಬಿಟ್ಟಿದ್ದಾರೆ...ಪೆಟ್ಟಿಗೆ ಕೆಳಗಿಟ್ಟು ಅತ್ತ ದಾವಿಸಿದ. ತಾಯಿಯನ್ನು ತಬ್ಬಿಕೊಂಡವನೇ ಕಟ್ಟಿಟ್ಟ ದುಃಖವನ್ನೆಲ್ಲ ಬಿಚ್ಚಿಡುವವನಂತೆ ಬಿಕ್ಕಿ ಬಿಕ್ಕಿ ಅಳತೊಡಗಿದ.

‘‘ನನಗೆ ಗೊತ್ತು ಮಗಾ...ನನ್ನ ಮಗನ ನೋವು ನನಗೆ ಗೊತ್ತು...’’ ಎನ್ನುತ್ತಾ ತಾಯಿಯೂ ಅಳತೊಡಗಿತು.

ಆ ಭಾವೋದ್ವೇಗ ಸನ್ನಿವೇಶದಲ್ಲೂ ಒಂದು ಪ್ರಶ್ನೆ ಪಪ್ಪುವನ್ನು ಕಾಡದೇ ಇರಲಿಲ್ಲ.

‘‘ತಾಯಿಗೆ ಏನು ಗೊತ್ತು? ನಾನು ಜಾನಕಿಯನ್ನು ಇಷ್ಟ ಪಡುತ್ತಿರುವುದು ತಾಯಿಗೆ ಗೊತ್ತಿದೆಯೆ?’

ಸ್ನಾನ, ನಿದ್ದೆ, ಊಟ, ಇವುಗಳಲ್ಲೇ ಅಂದು ಸಮಯ ಮುಗಿಯಿತು. ವಿಶೇಷ ಮಾತುಕತೆಗಳು ಅವರಲ್ಲಿ ನಡೆಯುತ್ತಿರಲಿಲ್ಲ. ಒಂದು ರೀತಿಯಲ್ಲಿ ವೌನ ಅವರ ಮಧ್ಯೆ ಗೋಡೆ ಕಟ್ಟಿದಂತಿತು. ಲಕ್ಷ್ಮಮ್ಮ ಆಗಾಗ ಉದ್ದೇಶಪೂರ್ವಕವಾಗಿ ಆ ಮೌನವನ್ನು ಮುರಿಯುವ ಪ್ರಯತ್ನ ಮಾಡುತ್ತಿದ್ದರು.

ಸಂಜೆಯ ಹೊತ್ತಿಗೆ ಗುರೂಜಿಯ ಕರೆ ಬಂತು. ತಂದೆ ಮಕ್ಕಳು ಅವರನ್ನು ಭೇಟಿ ಮಾಡಲು ಹೊರಟರು. ಅವಸರವಸರವಾಗಿ ಗುರೂಜಿ ಯಾಕೆ ಕರೆ ಕಳುಹಿಸಿದರು ಎನ್ನುವುದರ ಕುರಿತಂತೆ ಪಪ್ಪುವಿಗೆ ಕುತೂಹಲವಾಯಿತು.

ದಾರಿಯ ಮಧ್ಯೆ ಅದು ಇದು ಎಂದು ಮಾತನಾಡುವಾಗ ಪಪ್ಪು ಮೆಲ್ಲಗೆ ಕೇಳಿದ ‘‘ಅಪ್ಪ, ಜಾನಕಿ ಅಮೆರಿಕದಿಂದ ಬರಲಿಲ್ಲವೆ?’’

ಅನಂತಭಟ್ಟರು ಪ್ರತಿಕ್ರಿಯಿಸಲಿಲ್ಲ.

‘‘ಯಾಕಪ್ಪ? ಜಾನಕಿಯ ವಿಶೇಷ ಏನೂ ಇಲ್ಲವೆ?’’ ಪಪ್ಪು ಒತ್ತಿ ಕೇಳಿದ.

‘‘ನಿನಗೆ ಗೊತ್ತಿಲ್ಲವೆ? ಅಮ್ಮ ಹೇಳಿರಬಹುದು ಎಂದು ತಿಳಿದುಕೊಂಡೆ...’’

‘‘ಏನಪ್ಪ ವಿಷಯ?’’

‘‘ಜಾನಕಿ ಅಮೆರಿಕಕ್ಕೆ ಹೋದವಳು ಒಮ್ಮೆಯೂ ಊರಿಗೆ ಬಂದಿಲ್ಲ. ಅವಳು ಅಲ್ಲೇ ಮದುವೆಯಾದಳು. ಗುರೂಜಿಯವರ ಹತ್ತಿರದ ಸಂಬಂಧಿಯ ಮಗ ಎಂದು ಹೇಳುತ್ತಾರೆ. ಸಾಫ್ಟ್‌ವೇರ್ ಇಂಜಿನಿಯರ್ ಅಂತೆ. ಅವರ ಕುಟುಂಬ ಕಳೆದ 20 ವರ್ಷಗಳಿಂದ ಅಮೆರಿಕದಲ್ಲೇ ಇದೆ. ಗುರೂಜಿಗೂ ಹುಡುಗ ಹಿಡಿಸಿದನಂತೆ. ಅಂತೂ ಅಲ್ಲೇ ಅವಸರದಲ್ಲಿ ಮದುವೆಯೂ ಆಗಿದೆ. ಅಮೆರಿಕದ ಕಾನೂನು ಪ್ರಕಾರ ಮದುವೆಯಾಗಿದ್ದಾರೆ. ಮೂರು ತಿಂಗಳು ಬಿಟ್ಟು ಗುರೂಜಿ ಮತ್ತು ಅವರ ಪತ್ನಿ ಅಮೆರಿಕಕ್ಕೆ ಹೋಗುವ ಯೋಚನೆ ಉಂಟಂತೆ...’’

ಯಾವುದೋ ಪ್ರಪಾತಕ್ಕೆ ಆಯ ತಪ್ಪಿ ಬಿದ್ದವನ ಸ್ಥಿತಿ ಪಪ್ಪುವಿನದ್ದು. ಒಂದು ಕ್ಷಣ ಹಾಗೆಯೇ ನಿಂತು ಬಿಟ್ಟ.

ಅನಂತ ಭಟ್ಟರು ಮಗನ ಕಡೆ ತಿರುಗಿ ‘‘ಏನು ಯೋಚಿಸುತ್ತಿದ್ದೀಯ....ಬೇಗ ನಡೆ’’ ಎಂದರು.

ಬಜತ್ತೂರಿನ ಶಾಲೆಯಲ್ಲಿ ಗುರೂಜಿ, ಸುಬ್ಬಣ್ಣ ಮೇಷ್ಟ್ರು ಇವರಿಗಾಗಿಯೇ ಕಾಯುತ್ತಿದ್ದರು. ಪಪ್ಪು ಗುರೂಜಿ ಮತ್ತು ಸುಬ್ಬಣ್ಣ ಮೇಷ್ಟ್ರ ಕಾಲು ಮುಟ್ಟಿ ನಮಸ್ಕರಿಸಿದ.

‘‘ನಿನ್ನನ್ನು ನೋಡಿ ಸಂತೋಷವಾಯಿತು ಕಣಪ್ಪ...ಇಡೀ ಶಾಲೆಗೆ ಮಾತ್ರವಲ್ಲ ಊರಿಗೂ ನಿನ್ನಿಂದ ಹೆಮ್ಮೆ...’’ ಎಂದು ಸುಬ್ಬಣ್ಣ ಮೇಷ್ಟ್ರು ಪಪ್ಪುವಿನ ಬೆನ್ನು ತಟ್ಟಿದರು.

ಎಲ್ಲರೂ ಗುರೂಜಿಯ ಮನೆಯ ಕಡೆಗೆ ಹೊರಟರು.

ಊರಲ್ಲೇನೋ ವಿಶೇಷವಿದೆ. ಜನರು ಓಡಾಡುತ್ತಿ ದ್ದಾರೆ, ಎಲ್ಲಕ್ಕಿಂತ ಮುಖ್ಯವಾಗಿ ತನ್ನನ್ನು ಹಲವರು ಗುರು ತಿಸುತ್ತಿದ್ದಾರೆ ಎನ್ನುವುದು ಪಪ್ಪುವಿನ ಅರಿವಿಗೆ ಬಂತು.

‘‘ಅರೆ! ಯುದ್ಧವೇನಾದರೂ ಘೋಷಣೆಯಾಗಿ ದೆಯೆ?’’ ಎಂಬ ಪ್ರಶ್ನೆಯೊಂದು ಅವನ ತಲೆಯಲ್ಲಿ ಸುಳಿದು, ತನಗೆ ತಾನೇ ನಕ್ಕ.

‘‘ಮುಂದಿನ ರವಿವಾರ ಶಾಲೆಯ ಸಭಾಭವನದಲ್ಲಿ ನಿನಗೆ ಸನ್ಮಾನ ಇಟ್ಟಿದ್ದೇವೆ....’’ ಗುರೂಜಿ ಹೇಳಿದರು.

‘‘ನನ್ನಂತಹ ಹುಡುಗನಿಗೆ ಸನ್ಮಾನ ಯಾಕೆ ಗುರೂಜಿ?’’

‘‘ಬೇಕು...ನಿನ್ನನ್ನು ಕಂಡು ಈ ಹುಡುಗರು ಪಾಠ ಕಲಿಯಬೇಕು....ನೀನು ನಮ್ಮ ಊರಿಗೆ ಆದರ್ಶ ವಾಗಬೇಕು...’’ ಗುರೂಜಿ ಆದೇಶ ನೀಡಿದರು.

ಪಪ್ಪು ತಲೆಯಾಡಿಸಿದ. ಅತ್ತಿತ್ತ ನೋಡಿದರೆ ಎಲ್ಲ ಕಡೆಯೂ ಏನೋ ವಿಶೇಷ. ಬ್ಯಾನರ್‌ಗಳು, ಬಾವುಟಗಳು...

‘‘ಊರಲ್ಲೇನು ವಿಶೇಷ?’’ ಪಪ್ಪು ತಟ್ಟನೆ ಕೇಳಿದ.

‘‘ಚುನಾವಣೆ ಬಂತಲ್ಲಪ್ಪ...ಎಲ್ಲ ಕಡೆ ಎಲೆಕ್ಷನ್ ಗದ್ದಲ’’ ಸುಬ್ಬಣ್ಣ ಮೇಷ್ಟ್ರು ಶಿಷ್ಯನಿಗೆ ವಿವರಿಸಿದರು.

‘‘ಈ ದೇಶವನ್ನು ದೋಚೋದಕ್ಕೆ ಒಂದು ಚುನಾವಣೆ...’’ ಗುರೂಜಿ ಹೂಂಕರಿಸಿದರು. ಅವರ ದೇಹಕ್ಕೆ ವಯಸ್ಸಾದರೂ ಧ್ವನಿಯಿನ್ನೂ ತನ್ನ ತೇಜಸ್ಸನ್ನು ಉಳಿಸಿಕೊಂಡಿದೆ ಅನ್ನಿಸಿತು ಪಪ್ಪುವಿಗೆ.

‘‘ಪ್ರತಾಪ ಸಿಂಹ...’’ ಗುರೂಜಿ ತನ್ನ ಹೆಸರನ್ನು ಪೂರ್ತಿಯಾಗಿ ಕರೆದಾಗ ಅಚ್ಚರಿಯಿಂದ ಅವರೆಡೆಗೆ ನೋಡಿದ.

‘‘ನಮ್ಮ ಪಕ್ಷದೋರೂ ಕಾಂಗ್ರೆಸ್‌ನೋರ ದಾರಿಯನ್ನೇ ಹಿಡಿದಿದ್ದಾರೆ. ಆದರೂ ಚುನಾವಣೆಯಲ್ಲಿ ಹಿಂದುತ್ವವನ್ನು ಗೆಲ್ಲಿಸೋದು ನಮ್ಮ ಉದ್ದೇಶವಾಗಿದೆ. ಪ್ರತಾಪ...ಸನ್ಮಾನದ ದಿನ ನೀನು ಹಿಂದುತ್ವವನ್ನು ಬಡಿದೆಚ್ಚರಿಸುವ ಕೆಲವು ಮಾತುಗಳನ್ನಾಡಬೇಕು...ಪೊಳ್ಳು ಸೆಕ್ಯುಲರಿಸಂನ ಮುಖವಾಡ ಹರಿಯಬೇಕು...ಈ ಜನರು ನಿನ್ನಂತಹ ದೇಶಪ್ರೇಮಿಗಳ ಮಾತಿನಿಂದಲಾದರೂ ಎಚ್ಚೆತ್ತುಕೊಳ್ಳುತ್ತಾರೋ ನೋಡಬೇಕು...’’ ಗುರೂಜಿ ಪಪ್ಪುವಿನ ಹೆಗಲ ಮೇಲೆ ಕೈಯಿಟ್ಟು ಹೇಳುತ್ತಲೇ ಇದ್ದರು.

ಆದರೆ ಅವನಿಗೆ ಅದ್ಯಾವುದೋ ಸ್ಪಷ್ಟವಾಗುತ್ತಿರಲಿಲ್ಲ. ಶಬ್ದಗಳಿಗೆ ಶಬ್ದ ಡಿಕ್ಕಿ ಹೊಡೆದಂತೆ...ಒಂದರ ಜೊತೆಗೆ ಒಂದು ಬೆರೆತು ಕಲಸುಮೇಲೋಗರವಾದಂತೆ...ಹಲವು ಧ್ವನಿಗಳು ಅದರೊಳಗೆ ಸೇರಿಕೊಂಡಂತೆ...

ಗುರೂಜಿಯ ಮನೆಯಲ್ಲಿ ಇನ್ನೂ ಕೆಲವು ಕಾರ್ಯಕರ್ತರು ಇವರಿಗಾಗಿ ಕಾಯುತ್ತಿರುವಂತಿತ್ತು. ಗುರೂಜಿಯ ಮನೆ ತಲುಪಿ ಅಲ್ಲಿ ಪದ್ಮಮ್ಮ ಅಕ್ಕರೆಯಿಂದ ಕೊಟ್ಟದ್ದೇನನ್ನೋ ಪಪ್ಪು ಕುಡಿದ. ಅದು ಚಹಾವೋ, ಕಾಫಿಯೋ ಎನ್ನುವುದೂ ಗೊತ್ತಾಗಲಿಲ್ಲ. ಆ ಬಳಿಕ ಸನ್ಮಾನಯ ಕಾರ್ಯಕ್ರಮದ ವಿವರಗಳು ಗುರೂಜಿ ನೇತೃತ್ವದಲ್ಲಿ ಕಾರ್ಯಕರ್ತರು ಬಿರುಸಿನಿಂದ ಚರ್ಚೆ ನಡೆಸಿದರು. ಆಗಾಗ ತನ್ನ ಹೆಸರು ಪ್ರಸ್ತಾಪವಾಗುವುದು ಪಪ್ಪುವಿಗೆ ಕೇಳಿಸುತ್ತಿತ್ತಾದರೂ ಯಾಕೆ, ಏನು ಎನ್ನುವುದು ಆತನಿಗೆ ಅರ್ಥವಾಗುತ್ತಿರಲಿಲ್ಲ.

(ಗುರುವಾರ ಸಂಚಿಕೆಗೆ)

share
ವಾರ್ತಾಭಾರತಿ
ವಾರ್ತಾಭಾರತಿ
Next Story
X