Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಗ್ಲೇನ್ ಮ್ಯಾಗ್ರಾತ್ ಪಾರಿವಾಳ ಕಟ್ಟಿದ...

ಗ್ಲೇನ್ ಮ್ಯಾಗ್ರಾತ್ ಪಾರಿವಾಳ ಕಟ್ಟಿದ ಆರೈಕೆಯ ಗೂಡು!

ವಾರ್ತಾಭಾರತಿವಾರ್ತಾಭಾರತಿ20 May 2017 11:51 PM IST
share
ಗ್ಲೇನ್ ಮ್ಯಾಗ್ರಾತ್ ಪಾರಿವಾಳ ಕಟ್ಟಿದ ಆರೈಕೆಯ ಗೂಡು!

ಆಸ್ಟ್ರೇಲಿಯನ್ ಕ್ರಿಕೆಟ್‌ನ ಪ್ರಚಂಡ ಬೌಲರ್ ಗ್ಲೆನ್ ಮ್ಯಾಗ್ರಾತ್ ಆಟ ನಿಲ್ಲಿಸಿ ಇನ್ನೇನು ಒಂದು ದಶಕವಾಗುತ್ತಿದೆ.

ಕ್ರಿಕೆಟ್ ಜಗತ್ತಿನ ಬ್ಯಾಟ್ಸ್‌ಮೆನ್‌ಗಳ ಎದೆಯಲ್ಲಿ ನಡುಕ ಹುಟ್ಟಿಸುತ್ತಾ, ಅವರೇನಾದರೂ ಫೋರ್-ಸಿಕ್ಸರ್ ಹೊಡೆದಾಗ ಬೈಯುತ್ತಾ, ಔಟೇ ಆಗದಿದ್ದಾಗ ಆಕ್ಷೇಪಿಸುತ್ತಾ ಇದ್ದ ಮ್ಯಾಗ್ರಾತ್ ಈಗ ಮಾಗಿದ ಮನುಷ್ಯ!

‘ಪಾರಿವಾಳ’ ಕ್ರಿಕೆಟ್ ಮೈದಾನದಲ್ಲಿ ಇವನಿಗಿದ್ದ ಅಡ್ಡ ಹೆಸರು.

ಅಂತಹ ಕಾಡು ಪಾರಿವಾಳವೀಗ ಬೌಲಿಂಗ್ ಹಾರಾಟ ಬಿಟ್ಟ ನಂತರ ಆಸ್ಟ್ರೇಲಿಯಾದಲ್ಲಿ ಒಂದು ಕ್ಯಾನ್ಸರ್ ಚಿಕಿತ್ಸಾ ಫೌಂಡೇಷನ್ ಆರಂಭಿಸಿ ಸಾವಿರಾರು ಜನರಿಗೆ ನೆರವಾಗುತ್ತಿದೆ. ಸ್ತನ ಕ್ಯಾನ್ಸರ್ ರೋಗಿಗಳಿಗೆ ಆರೈಕೆ, ಸಾಂತ್ವನ ನೀಡುವ, ಬದುಕಿನ ಬಗ್ಗೆ ಭರವಸೆ, ಧೈರ್ಯ ತುಂಬುವ ಕೆಲಸ ಮಾಡುತ್ತಿದೆ.

ಮ್ಯಾಗ್ರಾತ್‌ರ ಪತ್ನಿ ಜೇನ್ ಈಗ್ಗೆ ಹತ್ತು ವರ್ಷಗಳ ಹಿಂದೆ ಸ್ತನ ಕ್ಯಾನ್ಸರ್‌ನಿಂದಾಗಿ ಮೃತಪಟ್ಟರು.

ಈ ಮ್ಯಾಗ್ರಾತ್ ಆಟದ ಮೈದಾನದಲ್ಲಿದ್ದಾಗ ಹೋರಾಡುವವರಾಗಿ, ಮೈದಾನದ ಹೊರಗೆ ಸೂಕ್ಷ್ಮ ಸಂವೇದನೆಯ ವ್ಯಕ್ತಿಯಾಗಿ, ಬಿಕ್ಕಟ್ಟುಗಳು ಎದುರಾದಾಗ ದಿಕ್ಕೆಡುವ ಹಿಂಸಾವಿನೋದಿಯಾಗಿ ನಾನಾ ರೀತಿ ಕಾಣಿಸಿಕೊಂಡಿದ್ದಾರೆ.

ಜೇನ್ ವಿಮಾನದಲ್ಲಿ ಮಿಠಾಯಿ ವಿತರಿಸುವ ಕೆಲಸ (ಗಗನಸಖಿ) ಮಾಡುತ್ತಿದ್ದಾಗ 1995ರಲ್ಲಿ ಹಾಂಗ್‌ಕಾಂಗ್‌ನ ನೈಟ್‌ಕ್ಲಬ್ ಒಂದರಲ್ಲಿ ಮ್ಯಾಗ್ರಾತ್‌ರೊಂದಿಗೆ ಮೊದಲ ಭೇಟಿಯಾಗಿ ಪ್ರೀತಿ ಹುಟ್ಟಿತ್ತು. ಆದರೆ ದುರದೃಷ್ಟವಶಾತ್ ಅದಾದ ಎರಡೇ ವರ್ಷದಲ್ಲಿ ಜೇನ್‌ಗೆ ಕ್ಯಾನ್ಸರ್ ಆಯಿತು. ಆಗ ಜೇನ್‌ರ ಜೊತೆ ದೃಢವಾಗಿ ನಿಂತ ಮ್ಯಾಗ್ರಾತ್ ಸ್ಥೈರ್ಯ ತುಂಬುತ್ತಿದ್ದರು. 2001ರಲ್ಲಿ ಅವರು ಮದುವೆಯಾದರು. ಇಬ್ಬರು ಮಕ್ಕಳೂ ಆದುವು. ಆದರೆ ಜೇನ್ ಬದುಕುಳಿಯಲಿಲ್ಲ. ಆಗಲೇ ಸ್ತನ ಕ್ಯಾನ್ಸರ್ ಬಗ್ಗೆ ಜನರಲ್ಲಿ ಅರಿವು ಮೂಡಿಸುವ, ಚಿಕಿತ್ಸೆಗೆ ನೆರವಾಗುವ ಉದ್ದೇಶದಿಂದ ಮ್ಯಾಗ್ರಾತ್ ಫೌಂಡೇಶನ್ ಆರಂಭಿಸಿದರು. ತಮ್ಮ ಕ್ರಿಕೆಟ್ ಗಳಿಕೆಯ ಒಂದಷ್ಟು ಹಣ ಹಾಕಿ, ದಾನಿಗಳಿಂದಲೂ ಹಣ ಸಂಗ್ರಹಿಸಿ ಇದುವರೆಗೂ ಐವತ್ತು ಸಾವಿರ ಜನರಿಗೆ ಸ್ತನ ಕ್ಯಾನ್ಸರ್ ಚಿಕಿತ್ಸೆಗಾಗಿ ಮ್ಯಾಗ್ರಾತ್ ನೆರವಾಗಿದ್ದಾರೆ.

ಐಪಿಎಲ್ ಟೂರ್ನಿಗಾಗಿ ಇಂಡಿಯಾದಲ್ಲಿದ್ದಾಗಲೇ ಪುನಃ ಮದುವೆಯಾದ ಮ್ಯಾಗ್ರಾತ್ ಮಾಗಿ ಮೃದುವಾಗಿದ್ದಾರೆಂದು ಎಲ್ಲರೂ ಭಾವಿಸಿದ್ದಾಗಲೇ ಕಳೆದ ವರ್ಷ ಅವರೊಂದು ಅಸಡ್ಡಾಳ ಕೆಲಸ ಮಾಡಿಬಿಟ್ಟರು.

ಆಫ್ರಿಕಾ ಖಂಡದ ಜಿಂಬಾಬ್ವೆಯಲ್ಲಿ ಹಣ ನೀಡಿದರೆ ಸರಕಾರವೇ ಕಾಡು ಪ್ರಾಣಿಗಳನ್ನು ಗುಂಡಿಟ್ಟು ಕೊಲ್ಲಲು ಅನುಮತಿ ನೀಡುವ ಕ್ರೂರ ವ್ಯವಸ್ಥೆಯೊಂದಿದೆ. ಒಮ್ಮೆ ಅಲ್ಲಿಗೆ ಹೋದ ಮ್ಯಾಗ್ರಾತ್‌ರು ಒಂದು ಆನೆ, ಕಾಡೆಮ್ಮೆ ಹಾಗೂ ಹಲ ಕಾಡು ಕಿರುಬಗಳನ್ನು ಬಂದೂಕಿನಿಂದ ಸುಟ್ಟು ಫೋಟೊ ತೆಗೆಸಿಕೊಂಡು ಬಂದಿದ್ದರು. ಆಮೇಲೆ ಅದು ಹೇಗೊ ಪ್ರಖ್ಯಾತ ವನ್ಯಜೀವಿ ಫೋಟೊಗ್ರಾಫರ್ ಆಸ್ಟ್ರೇಲಿಯಾದ ರಿಮ್ಮರ್ ಕೈಗೆ ತಲುಪಿಬಿಟ್ಟವು.

ಮ್ಯಾಗ್ರಾತ್‌ರ ವ್ಯಕ್ತಿತ್ವ, ಕೌಟುಂಬಿಕ ಕಷ್ಟಗಳು, ಅವರ ಪತ್ನಿಯ ಸಾವು, ಕ್ಯಾನ್ಸರ್ ರೋಗಿಗಳಿಗೆ ನೆರವು ನೀಡುವ ಎಲ್ಲಾ ವಿಚಾರ ತಿಳಿದಿದ್ದ ರಿಮ್ಮರ್‌ಗೆ ಆ ಫೋಟೊಗಳನ್ನು ನೋಡಿ ಶಾಕ್ ಆಯಿತು. ಬಹಳ ಯೋಚಿಸಿ ಕೊನೆಗೆ ಮ್ಯಾಗ್ರಾತ್‌ರ ಪ್ರಾಣಿಕೊಲೆಗಳ ಫೋಟೊಗಳನ್ನು ಆಸ್ಟ್ರೇಲಿಯಾದ ಜನರ ಗಮನಕ್ಕೆ ತಂದ ರಿಮ್ಮರ್, ಇದೊಂದು ಜಿಗುಪ್ಸೆ ಹುಟ್ಟಿಸುವ ಅಮಾನವೀಯ ಕೃತ್ಯ ಎಂದು ಕಟು ಟೀಕೆ ಮಾಡಿದ.

ಸಿನೆಮಾ ನಟರು, ಕ್ರಿಕೆಟಿಗರನ್ನು ಟೀಕಿಸಿದರೆ ಕೋಪಗೊಳ್ಳುವ ಬುದ್ಧಿಮಾಂದ್ಯರು ಭಾರತದಲ್ಲಿರುವಷ್ಟೇ ಆಸ್ಟ್ರೇಲಿಯಾದಲ್ಲೂ ಇದ್ದಾರೆ. ಅಂತವರು ತಮ್ಮ ಆರಾಧ್ಯ ದೈವ ಮ್ಯಾಗ್ರಾತ್‌ರನ್ನು ಟೀಕಿಸಿದ ರಿಮ್ಮರ್ ವಿರುದ್ಧ ಜಗಳಕ್ಕಿಳಿದರು. ಕೊಂದೇ ಹಾಕುವುದಾಗಿಯೂ ಬೆದರಿಸಿದರು. ಆದರೆ ರಿಮ್ಮರ್ ಹೆದರದೆ ತನ್ನ ಕೆಲಸ ಮುಂದುವರಿಸಿದ. ಕೊನೆಗೆ ಬೈಯ್ಯುವವರ ಸಂಖ್ಯೆ ಜಾಸ್ತಿಯಾದಾಗ ಮ್ಯಾಗ್ರಾತ್‌ರ ಕ್ಷಮೆ ಕೇಳಿದ.

‘‘ನನ್ನ ಬದುಕಿನ ಕಷ್ಟದ ಸಮಯದಲ್ಲಿದ್ದೆ, ಆಗ ನಾನೇನು ಮಾಡಬೇಕು, ಮಾಡುತ್ತಿದ್ದೇನೆ ಎನ್ನುವುದರ ವಿವೇಚನೆ ನನಗಿರಲಿಲ್ಲ. ನಾನು ತಪ್ಪು ಮಾಡಿದ್ದೇನೆ. ಕ್ರೂರಿಯಾಗಿ ವರ್ತಿಸಿದ್ದೇನೆ. ನನ್ನ ಕ್ಷಮಿಸಿ’’ ಅಂತ ಕೇಳಿಕೊಂಡ ಮೇಲೆ ಆ ವಿವಾದ ತಣ್ಣಗಾಯಿತು. ಆಸ್ಟ್ರೇಲಿಯಾದ ಇನ್ನೊರ್ವ ಫಾಸ್ಟ್ ಬೌಲರ್ ಆಗಿದ್ದ ಬ್ರೆಟ್ ಲೀ ಸಹ ಹೀಗೆ ಆಫ್ರಿಕಾದಲ್ಲಿ ಶಿಕಾರಿ ನಡೆಸಿ ಎಲ್ಲರಿಂದ ಟೀಕಿಸಿಕೊಂಡು ಇತ್ತೀಚೆಗೆ ಕ್ಷಮೆ ಕೇಳಿದ್ದಾರೆ.

ಈ ಕ್ರೀಡಾಪಟುಗಳ ವ್ಯಕ್ತಿತ್ವದಲ್ಲಿನ ವಿರೋಧಾಭಾಸಗಳ ಬಗ್ಗೆ ಯೋಚಿಸಿದರೆ ಆಶ್ಚರ್ಯ ಹಾಗೂ ಬೇಸರದ ಭಾವನೆ ಮೂಡುತ್ತದೆ.

ಫಾಸ್ಟ್ ಬೌಲರ್ ಆಗಿದ್ದಾಗ ಶತ ಒರಟನಂತಿರುತ್ತಿದ್ದರು. ಆದರೆ ಅದ್ಭುತ ಬೌಲರ್ ಆಗಿದ್ದ ಮ್ಯಾಗ್ರಾತ್‌ಗೆ ತನ್ನ ಪ್ರಿಯತಮೆಗೆ ಕ್ಯಾನ್ಸರ್ ಆದಾಗ ಜೊತೆ ನಿಂತು ನೆರವಾಗಬೇಕೆಂಬ ಮಾನವೀಯತೆಯ ಮಾತ್ರವಲ್ಲ ವ್ಯಕ್ತಿತ್ವದ ಜ್ಞಿಠಿಛಿಜ್ಟಜಿಠಿಯೂ ಇತ್ತು. ಆದರೆ ಕಾಡುಗಳಲ್ಲಿ ತಮ್ಮ ಪಾಡಿಗೆ ತಾವು ಬದುಕಿಕೊಂಡಿರುವ ಪ್ರಾಣಿಗಳ ಎದೆ ಸೀಳುವಂತೆ ರೈಫಲ್‌ನಿಂದ ಗುಂಡು ಹಾರಿಸುವಾಗ ಅದೇ ಸಂವೇದನೆಗಳು ಏಕೆ ಮಿಡಿಯುವುದಿಲ್ಲ ಎಂದು ಯೋಚಿಸಿದರೆ ಸರಳವಾಗಿ ಉತ್ತರ ಸಿಗುವುದಿಲ್ಲ.

ಗ್ಲೇನ್ ಮ್ಯಾಗ್ರಾತ್ ಈಗ ನಿಜ ಮನುಷ್ಯನಾಗುವತ್ತ ಸಾಗುತ್ತಿದ್ದಾರೆೆ. ಕ್ರಿಕೆಟ್ ಆಡುವಾಗ ಅವರೆಷ್ಟೇ ಜಗಳಗಂಟನಾಗಿದ್ದರೂ ವಿಶ್ವ ಶ್ರೇಷ್ಠ ಬೌಲರ್ ಆಗಿದ್ದರು. ಈಗ ತಮ್ಮ ಪೂರ್ಣ ಸಮಯವನ್ನು ಕ್ಯಾನ್ಸರ್ ರೋಗಿಗಳಿಗೆ ನೆರವಾಗುವ ಕೆಲಸಕ್ಕಾಗಿ ವ್ಯಯಿಸುತ್ತಿದ್ದಾರೆ.

ಒಂದು ಕಾಲದಲ್ಲಿ ಕಚ್ಚುತ್ತಿದ್ದ ಕುಟುಕುತ್ತಿದ್ದ ಪಾರಿವಾಳವೀಗ ಕಷ್ಟದಲ್ಲಿ ಬಸವಳಿದವರಿಗೆ ತನ್ನ ರೆಕ್ಕೆಗಳನ್ನು ಹರಡಿ ಆಸರೆಯಾಗುತ್ತಿದೆ.

[email protected]

share
ವಾರ್ತಾಭಾರತಿ
ವಾರ್ತಾಭಾರತಿ
Next Story
X