Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಮಾತು ಮರೆತ ಅಗಳಿಕೆಯ ಘಳಿಗೆ

ಮಾತು ಮರೆತ ಅಗಳಿಕೆಯ ಘಳಿಗೆ

ವಾರ್ತಾಭಾರತಿವಾರ್ತಾಭಾರತಿ13 Nov 2016 12:05 AM IST
share
ಮಾತು ಮರೆತ ಅಗಳಿಕೆಯ ಘಳಿಗೆ

ಧಾರಾವಾಹಿ-41

ತಿಂಗಳು ಕಳೆದರೂ ಅಜ್ಜನಿಗೆ ಮನೆಯ ಹೊರಗೆ ಕಾಲಿಡುವ ಧೈರ್ಯ ಬರಲಿಲ್ಲ. ಪ್ರತಿದಿನ ತಪ್ಪದೆ ಮಸೀದಿಗೆ ಹೋಗುತ್ತಿದ್ದವರು ಈಗ ಅತ್ತ ಸುಳಿಯುತ್ತಿರಲಿಲ್ಲ. ಇಡೀ ಊರು ಈಗ ಅಜ್ಜನ ಹಿಂದೆ ಆಡಿಕೊಳ್ಳತೊಡಗಿತ್ತು.
‘‘ಕಾಲೇಜಿಗೆ ಕಳಿಸಬೇಡ ಎಂದು ಇಡೀ ಊರೇ ಬುದ್ಧಿ ಹೇಳುವಾಗ ಅವನಿಗೆ ಅರ್ಥವಾಗಲಿಲ್ಲ. ಈಗ ಅನುಭವಿಸಲಿ. ಆ ತ್ಯಾಂಪಣ್ಣ ಅಲ್ಲದಿದ್ದರೆ ಅವಳಿಗೆ ನಾವೇ ಬುದ್ಧಿ ಕಲಿಸುತ್ತಿದ್ದೆವು. ಅವಳು ಓಡಿ ಹೋಗಲಿಕ್ಕೆ ಕಾರಣವೇ ತ್ಯಾಂಪಣ್ಣ. ಅಹಂಕಾರ ಹೆಚ್ಚಾದರೆ ಹೀಗೆಯೇ ಆಗುವುದು...’’ ದೇಹದ ಮಾಂಸವನ್ನೇ ಕುಕ್ಕಿ ಕುಕ್ಕಿ ತಿನ್ನುವ ಇಂತಹ ಮಾತುಗಳು ಅದೆಲ್ಲಿಂದಲೋ ತೇಲಿ ತೇಲಿ ಬಂದು ಅಜ್ಜನ ಕಿವಿಗಪ್ಪಳಿಸುತ್ತಿದ್ದವು.
 ಕಾಡಂಕಲ್ ಮನೆ ಈಗ ‘ಓಡಿ ಹೋದವಳ ಮನೆ’ಯಾಗಿತ್ತು. ಕಾಡಂಕಲ್ ಅಬ್ಬು ಬ್ಯಾರಿ, ಪಂಚಾಯಿತಿ ಅಬ್ಬು ಬ್ಯಾರಿ ಆಗಿದ್ದ ನಿನ್ನ ಅಜ್ಜನನ್ನು ಈಗ ಜನ ‘ಓಡಿ ಹೋದವಳ ತಂದೆ’ ಎಂದು ಗುರುತಿಸತೊಡಗಿದ್ದರು. ಆ ಮನೆಯ ವಿಷಯ ಪ್ರಸ್ತಾಪವಾದಾಗಲೆಲ್ಲ ಗಹಗಹಿಸಿ ನಗುತ್ತಿದ್ದರು. ಕ್ಯಾಕರಿಸಿ ಉಗಿಯುತ್ತಿದ್ದರು. ಒಂಥರಾ ಅಘೋಷಿತ ಬಹಿಷ್ಕಾರವನ್ನು ಇಡೀ ಊರೇ ನಿನ್ನಜ್ಜನ ಮೇಲೆ ಹೇರಿ ಬಿಟ್ಟಿತ್ತು. ರಾಜನಂತೆ ಬದುಕಿದ್ದ ನಿನ್ನಜ್ಜ ಅಪಮಾನ, ನೋವು, ಜನರ ಪರಿಹಾಸ್ಯದಿಂದ ಕುಗ್ಗಿ ಹೋದರು. ಅಪ್ಪಚ್ಚಿಯಾಗಿ ಬಿಟ್ಟರು. ಅವರಿಗೆ ಈಗ ಯಾವುದರ ಮೇಲೂ ಆಸಕ್ತಿ ಇರಲಿಲ್ಲ. ಜಿಂಕೆಯಂತೆ ಮನೆ ತುಂಬಾ ಓಡಾಡುತ್ತಿದ್ದ ಅಜ್ಜಿ ಸೊಂಟ ಮುರಿದವರಂತೆ ಒಂದು ಕಡೆ ಬಿದ್ದಿರುತ್ತಿದ್ದರು. ಅವರ ಅಳು ನಿಂತಿತ್ತು. ಕಣ್ಣೀರು ಬತ್ತಿತ್ತು. ಆದರೆ ಅವರು ಪ್ರತಿ ಉಸಿರಿಗೂ ನರಳುತ್ತಿದ್ದರು. ನೋವು ಸಹಿಸಿಕೊಳ್ಳಲಾಗದೆ ತುಟಿಕಚ್ಚಿ, ಕಣ್ಣು ಮುಚ್ಚಿ ವಿಲವಿಲಾಂತ ಒದ್ದಾಡುತ್ತಿದ್ದರು.
ಹೀಗೆ ವರ್ಷಗಳು ಕಳೆಯಿತು.
ಊರಿನ ಜನ ‘ಓಡಿ ಹೋದವಳನ್ನು’ ಮರೆಯುತ್ತಾ ಬಂದರು. ಆದರೆ ಅಜ್ಜ-ಅಜ್ಜಿ ತಮ್ಮ ಪ್ರೀತಿಯ ಮಗಳನ್ನೂ, ಅವಳು ಮಾಡಿದ ದ್ರೋಹವನ್ನೂ ಮರೆಯಲಿಲ್ಲ. ಅವರಿಗೆ ಮರೆಯಲು ಸಾಧ್ಯವಾಗಲಿಲ್ಲ. ಹೃದಯದ ಆಳಕ್ಕೆ ಇರಿದ ಇರಿತದ ಗಾಯ ಮಾಸಲೇ ಇಲ್ಲ.
ಒಂದು ವೇಳೆ ನಿನ್ನಮ್ಮ ಮರಳಿ ಬಂದಿದ್ದರೆ ಅವಳು ಯಾವ ಸ್ಥಿತಿಯಲ್ಲಿದ್ದರೂ ಅಜ್ಜ-ಅಜ್ಜಿ ಅವಳನ್ನು ಸ್ವೀಕರಿಸುತ್ತಿದ್ದರು. ಅಷ್ಟು ಪ್ರೀತಿಯಿತ್ತು ಅವರಿಗೆ ಅವಳ ಮೇಲೆ. ಅವಳು ಬರಲಿಲ್ಲ. ಒಮ್ಮೆ ಕೂಡಾ ಬಂದು ಅಜ್ಜ-ಅಜ್ಜಿಯನ್ನು ನೋಡಲಿಲ್ಲ. ಅಜ್ಜ ತೀವ್ರ ಅನಾರೋಗ್ಯ ಪೀಡಿತರಾಗಿ ಹಾಸಿಗೆ ಹಿಡಿದಿದ್ದಾಗ ಬಾಗಿಲ ಬಳಿ ಸ್ವಲ್ಪಸದ್ದಾದರೆ ತನ್ನನ್ನು ನೋಡಲು ಎಲ್ಲಿ ತನ್ನ ಮಗಳು ಬಂದಿದ್ದಾಳೋ ಎಂದು ಕತ್ತು ಹೊರಳಿಸಿ ನೋಡುತ್ತಿದ್ದರು. ನಿರಾಸೆಯಿಂದ ಮತ್ತೆ ಕಣ್ಣು ಮುಚ್ಚುತ್ತಿದ್ದರು. ಪ್ರಾಣ ಬಿಡುವ ಹೊತ್ತಿನಲ್ಲೂ ಅವರ ಕಣ್ಣುಗಳು ತನ್ನ ಮಗಳ ಮುಖವನ್ನು ಹುಡುಕುತ್ತಿದ್ದವು. ಆದರೂ ನಿನ್ನಮ್ಮ ಬರಲೇ ಇಲ್ಲ. ಅದೇ ನೋವಿನಲ್ಲಿ ಅಜ್ಜ ತೀರಿಕೊಂಡರು. ಹುಟ್ಟಿ ಬೆಳೆದ ಈ ಮನೆಯ ದಾರಿಯನ್ನೇ ಅವಳು ಮರೆತಳು. ಹೊತ್ತು, ಹೆತ್ತು, ಸಾಕಿ ಸಲಹಿದ ಹೆತ್ತವರನ್ನೇ ಮರೆತು ಬಿಟ್ಟಳು...’’
‘‘ಈಗ ಹೇಳು, ಇಂತಹ ಒಂದು ಹೆಣ್ಣಿನ ಬಗ್ಗೆ ಯಾರಾದರೂ ಕೇಳ್ತಾರಾ, ಯಾರಾದರೂ ವಿಚಾರಿಸು ತ್ತಾರಾ. ಅವಳನ್ನು ಎಲ್ಲರೂ ದ್ವೇಷಿಸುತ್ತಾರೆ. ಎಲ್ಲರೂ ಶಪಿಸುತ್ತಾರೆ. ಅವಳ ಹೆಸರು ಹೇಳುವುದು, ಅವಳನ್ನು ನೆನಪಿಸುವುದು ಕೂಡಾ ಇಲ್ಲಿ ಯಾರಿಗೂ ಇಷ್ಟ ಇಲ್ಲ... ನನಗೂ..’’
ಐಸು ಹೊರಳಿ ಮಲಗಿದವಳು ಮತ್ತೆ ಮಾತನಾಡ ಲಿಲ್ಲ. ತಾಹಿರಾಳಿಗೂ ಕೇಳಲು, ಹೇಳಲು ಏನೂ ಉಳಿದಿರಲಿಲ್ಲ. ಅವಳು ಮಾಮಿಯ ಬೆನ್ನಿಗೆ ಮುಖ ಹುದುಗಿಸಿ ಕಣ್ಣು ಮುಚ್ಚಿದಳು. ನಿದ್ದೆ ಹತ್ತಿರ ಸುಳಿಯಲಿಲ್ಲ. ಆ ಕತ್ತಲೆಯಲ್ಲೂ ಅವಳಿಗೆ ಅಮ್ಮನ ಮುಖವೇ ಕಾಣುತ್ತಿತ್ತು. ದುಗುಡ ತುಂಬಿದ ಮುಖ- ಮಾಮಿ ಹೇಳಿದ ಕತೆಯಿಂದ ಅವಳಿಗೆ ಏನೂ ಅನಿಸಲಿಲ್ಲ. ಯಾಕೆಂದರೆ ಅವಳು ಅವಳಮ್ಮನನ್ನು ತುಂಬಾ ತುಂಬಾ ಪ್ರೀತಿಸುತ್ತಿದ್ದಳು.
ಬೆಳಗ್ಗೆದ್ದ ತಾಹಿರಾಳಿಗೆ ಅಮ್ಮನ ನೆನಪಾಗತೊಡಗಿತ್ತು. ಎಂದೂ ಕಾಡದ ಅಮ್ಮ ಇಂದು ಅವಳನ್ನು ಕಾಡತೊಡಗಿದ್ದರು. ಜೊತೆಗೆ ತ್ಯಾಂಪಣ್ಣ ಶೆಟ್ಟಿ. ತ್ಯಾಂಪಣ್ಣ ಶೆಟ್ಟಿ ಈಗ ಇರಬಹುದೇ. ಇದ್ದರೆ ಅವರನ್ನೊಮ್ಮೆ ನೋಡಬೇಕು. ಅಜ್ಜ- ಅಜ್ಜಿಯ ಪ್ರೀತಿಯ ತ್ಯಾಂಪಣ್ಣ - ಅಮ್ಮನನ್ನು ಕಾಲೇಜಿಗೆ ಕರೆದುಕೊಂಡು ಹೋದ ತ್ಯಾಂಪಣ್ಣ ಶೆಟ್ಟಿಯನ್ನು ಒಮ್ಮೆ ಮಾತನಾಡಿಸಬೇಕು - ಅವಳ ಮನಸ್ಸು ಹಾತೊರೆಯತೊಡಗಿತು. ಅವಳು ಕಾಲೆಳೆಯುತ್ತಾ ಅಡುಗೆ ಕೋಣೆಗೆ ಬಂದಳು. ಅಲ್ಲಿ ಐಸು ಪಾತ್ರೆ ತೊಳೆಯುತ್ತಿದ್ದಳು.
ಐಸು ಅವಳನ್ನು ನೋಡಿ ನಕ್ಕಳು ಅಷ್ಟೇ, ಮಾತನಾಡಲಿಲ್ಲ. ಆ ನಗುವಿನಲ್ಲಿ ಜೀವವಿರಲಿಲ್ಲ.
ತಾಹಿರಾ ಅಲ್ಲೇ ಇದ್ದ ಸ್ಟೂಲ್‌ನಲ್ಲಿ ಕುಳಿತಳು. ಈಗಲೂ ಐಸು ಮಾತನಾಡಲಿಲ್ಲ.
‘‘ಮಾಮಿ...’’
‘‘ಹೂಂ...’’
‘‘ಯಾಕೆ ಮಾಮಿ ಸಪ್ಪಗಿದ್ದೀರಿ, ಹುಷಾರಿಲ್ಲವಾ?’’
‘‘ಹಾಗೇನಿಲ್ಲಮ್ಮಾ, ಚೆನ್ನಾಗಿದ್ದೇನೆ.’’
‘‘ಮತ್ತೆ ನೀವು ಮಾತೇ ಆಡ್ತಾ ಇಲ್ಲ.’’
‘‘ಏನಮ್ಮಾ - ಹೇಳು’’
‘‘ಮಾಮಿ ತ್ಯಾಂಪಣ್ಣ ಶೆಟ್ಟಿ ಈಗ ಇದ್ದಾರಾ?’’
‘‘ಯಾಕಮ್ಮಾ...!’’
‘‘ನನಗೆ ಅವರನ್ನೊಮ್ಮೆ ನೋಡಬೇಕು’’
‘‘ಇಲ್ಲಮ್ಮಾ, ಅವರು ತೀರಿಹೋಗಿ ಬಹಳ ವರ್ಷಗಳಾಯಿತು.’’
ತಾಹಿರಾಳ ಮುಖ ಸಪ್ಪಗಾಯಿತು. ಆನಂತರ ಇಬ್ಬರೂ ಮಾತನಾಡಲಿಲ್ಲ. ತಾಹಿರಾಳಿಗೆ ಮತ್ತೆ ಏನು ಮಾತನಾಡಬೇಕೆಂಬುದೇ ತಿಳಿಯಲಿಲ್ಲ.
‘‘ನಮ್ಮ ಮಸೀದಿ- ಬಾಬರಿ ಮಸೀದಿಯನ್ನು ಕೆಲವು ಮತಾಂಧರು ಒಡೆದು ಹಾಕಿದ್ರಲ್ಲ, ಅಂದೇ ಸಂಜೆ ತ್ಯಾಂಪಣ್ಣ ಶೆಟ್ಟಿ ತೀರಿಕೊಂಡರು.’’
‘‘ಏನಾಗಿತ್ತು ಮಾಮಿ ಅವರಿಗೆ?’’
‘‘ಹೃದಯಾಘಾತ... ಹೃದಯ ಒಡೆದು ತೀರಿಕೊಂಡರು.’’
‘‘................’’
‘‘ಆಗ ನಮ್ಮ ಇಡೀ ದೇಶ ಜಾತಿ-ಧರ್ಮ, ಮಂದಿರ-ಮಸೀದೀಂತ ಹೊಡೆದಾಡಿಕೊಂಡು ಸಾಯುತ್ತಿದ್ದರೆ, ಈ ಇಡೀ ಊರಿನ ಜನರೆಲ್ಲ ಜಾತಿ-ಧರ್ಮದ ನೆನಪೇ ಇಲ್ಲದೆ ತ್ಯಾಂಪಣ್ಣನ ಮನೆ ಮುಂದೆ ನೆರೆದು ಕಣ್ಣೀರು ಸುರಿಸುತ್ತಿದ್ದರು. ನಾನು ಅಜ್ಜಿ ಜೊತೆ ಹೋಗಿದ್ದೆ. ಆ ಮನೆಯಲ್ಲಿ ಹಿಂದುಗಳೆಲ್ಲ ಒಂದು ಕಡೆ ಕುಳಿತು ಭಜನೆ ಹೇಳುತ್ತಿದ್ದರೆ ಇನ್ನೊಂದು ಕಡೆ ಮುಸ್ಲಿಮರು ಸೇರಿ ಕುರ್‌ಆನ್ ಪಠಿಸುತ್ತಿದ್ದರು. ಆವತ್ತು ನಿನ್ನಜ್ಜನನ್ನು ನೋಡಬೇಕಿತ್ತು- ಜೀವವೇ ಇಲ್ಲದವರಂತೆ ಒಂದು ಮೂಲೆಯಲ್ಲಿ ಕುಳಿತು ಅಳುತ್ತಿದ್ದರು.’’
ಆನಂತರ ಐಸು ಮಾತನಾಡಲಿಲ್ಲ.
ತಾಹಿರಾ ಎದ್ದು ಹೋಗಿ ಮುಖ ತೊಳೆದು ಬಂದು ತಿಂಡಿ ತಿಂದು ಅಜ್ಜಿಯ ಕೋಣೆಗೆ ಬಂದು ಕುಳಿತಳು. ಅಜ್ಜಿ ಏನೋ ಯೋಚಿಸುತ್ತಿರುವಂತೆ ಕಂಡಿತು.
‘‘ಅಜ್ಜೀ, ನಾನು ನಾಳೆ ಹೋಗುತ್ತೇನೆ’’ ಅವಳು ಅಜ್ಜಿಯನ್ನು ತಬ್ಬಿಕೊಂಡಳು.
ಅಜ್ಜಿ ಅವಳ ಮುಖ ನೋಡಿದರು. ಆ ಮುಖದಲ್ಲಿ ಪ್ರಶ್ನೆಯಿತ್ತು.
‘‘ಹೌದಜ್ಜೀ. ನಾನು ಬಂದು ತಿಂಗಳಾಯಿತು ನಾಳೆ ಹೋಗುತ್ತೇನೆ.’’

ಈಗಲೂ ಅಜ್ಜಿ ಮಾತನಾಡಲಿಲ್ಲ. ಅವರು ಮಾತನಾಡುವ ಸ್ಥಿತಿಯಲ್ಲಿಲ್ಲ ಎಂಬುದು ಅವಳಿಗೆ ಅರ್ಥವಾಗಿತ್ತು. ತನ್ನ ಕೋಣೆಗೆ ಬಂದವಳು ಕಿಟಕಿಯ ಹೊರಗೆ ನೋಡುತ್ತಾ ಕುಳಿತು ಬಿಟ್ಟಳು. ಮರುದಿನವೂ ಮನೆ ಸೂತಕದ ಮನೆಯಂತೆಯೇ ಇತ್ತು. ತಾಹಿರಾ ತನ್ನ ಬಟ್ಟೆಗಳನ್ನೆಲ್ಲ ಜೋಡಿಸಿ ಬ್ಯಾಗಿಗೆ ತುಂಬಿಸುತ್ತಿದ್ದಾಗ ನಾಸರ್ ಬಂದು ಅವಳ ಪಕ್ಕ ನಿಂತಿದ್ದ.
‘‘ಇವತ್ತೇ ಹೋಗಬೇಕೂಂತ ತೀರ್ಮಾನಿಸಿದ್ದಿಯಾ?’’
‘‘ಹೌದು’’
ಈ ಮನೆಯಿನ್ನು ಸರಿಯಾಗಬೇಕಾ ದರೆ ಒಂದು ವಾರವಾದರೂ ಬೇಕು. ನೀನು ಇನ್ನು ಸ್ವಲ್ಪದಿನ ಇದ್ದಿದ್ದರೆ ಚೆನ್ನಾಗಿರುತ್ತಿತ್ತು. ಅಜ್ಜಿ, ಅಮ್ಮನಿಗೆ ಖುಷಿಯಾಗುತ್ತಿತ್ತು.
‘‘ಇನ್ನೊಮ್ಮೆ ಬರ್ತೇನೆ’’
‘‘ಯಾವಾಗ ಬರ್ತಿ’’
‘‘ಗೊತ್ತಿಲ್ಲ’’
‘‘ನೀನು ಬರುವಾಗ ಹೇಳು. ಅದೇ ಸಮಯದಲ್ಲಿ ನಾನೂ ಬರ್ತೇನೆ.’’
‘‘................’’
‘‘ನಾನು ಕೆಲವು ದಿನ ಬಿಟ್ಟು ನಿನ್ನ ಮನೆಗೆ ಬರ್ತೇನೆ. ನಿನ್ನ ತಾಯಿಯ ಜೊತೆ ಮಾತಾಡ್ತೇನೆ.’’
ಈಗಲೂ ತಾಹಿರಾ ಮಾತನಾಡಲಿಲ್ಲ.
ತಾಹಿರಾ ಅಜ್ಜಿಯ ಕೋಣೆಗೆ ಬಂದಳು. ಹಿಂದಿನಿಂದಲೇ ನಾಸರ್ ಬಂದ. ಅಜ್ಜಿ ಗೋಡೆಗೊರಗಿ ಹಾಸಿಗೆಯಲ್ಲಿ ಕಾಲು ನೀಟಿ ಕುಳಿತಿದ್ದರು. ಅವರು ಎಷ್ಟು ಕರೆದರೂ ತುಟಿ ಬಿಚ್ಚಲಿಲ್ಲ. ಕಣ್ಣು ಪಿಳಿ ಪಿಳಿ ಮಾಡುತ್ತಾ ಇಬ್ಬರನ್ನೂ ನೋಡುತ್ತಿದ್ದರು. ರಾತ್ರಿಯಾಗುತ್ತಲೇ ತಾಹಿರಾ ಹೊರಟು ನಿಂತಳು.
ಐಸು ಮಗನನ್ನು ಕರೆದು ‘‘ನೀನು ಅವಳನ್ನು ಬಸ್ಸು ನಿಲ್ದಾಣದವರೆಗೆ ಬಿಟ್ಟು ಬಾ. ಒಬ್ಬಳೇ ಹೋಗಬೇಕಲ್ಲ’’ ಎಂದಳು.
ಆಟೋ ಬಂದು ಅಂಗಳದಲ್ಲಿ ನಿಂತಿತು. ನಾಸರ್ ಅವಳ ಬ್ಯಾಗ್ ಎತ್ತಿ ಅದರಲ್ಲಿಟ್ಟ.
‘‘ನಾನು ಬರ್ತೀನಿ ಮಾಮಿ’’ ತಾಹಿರಾ ಐಸುನ ಕೈಹಿಡಿದು ಹೇಳಿದಳು.
‘‘ಇನ್ನು ಯಾವಾಗ ಬರ್ತೀ’’ ಐಸು ಅವಳ ಭುಜ ಹಿಡಿದು ಕೇಳಿದಳು.
‘‘ಗೊತ್ತಿಲ್ಲ ಮಾಮಿ. ಬರ್ತೇನೆ’’ ತಾಹಿರಾಳ ಮಾತಿನಲ್ಲಿ ಜೀವವೇ ಇರಲಿಲ್ಲ.
‘‘ನಿನ್ನ ಅಮ್ಮನಿಗೆ ನನ್ನ ಸಲಾಂ ಹೇಳು’’ ಮೊದಲ ಬಾರಿ ಆ ಮನೆಯಲ್ಲಿ ಅವಳಮ್ಮನ ಬಗ್ಗೆ ಮಾತು ಬಂದಿತ್ತು. ತಾಹಿರಾಳಿಗೆ ಗಂಟಲು ಉಕ್ಕಿ ಬಂತು.
‘‘ಮಾಮಿ, ಅಜ್ಜಿ ಮಾತಾಡ್ತಾ ಇಲ್ಲ.’’
‘‘ನಾನು ಹೇಳ್ತೇನೆ. ನೀನು ಹೋಗು. ಅವರಿನ್ನು ಸರಿಯಾಗಲು ಒಂದು ವಾರವಾದರೂ ಬೇಕು.’’
ತಾಹಿರಾಳ ಕಣ್ಣು ತುಂಬಿ ಬಂತು. ಅವಳು ಅಂಗೈಯಿಂದ ಕಣ್ಣೊರೆಸಿಕೊಳ್ಳುತ್ತಾ ಹೊಸಿಲು ದಾಟಿದಳು. ಆಟೋ ಹತ್ತಿ ಕುಳಿತಳು. ನಾಸರ್ ಕುಳಿತ. ಆಟೋ ಹೊರಟಿತು.
ದಾರಿಯುದ್ದಕ್ಕೂ ಇಬ್ಬರೂ ಮಾತನಾಡಲಿಲ್ಲ. ಆ ಮೌನದಲ್ಲಿ ಇಬ್ಬರ ಹೃದಯಗಳೂ ಮಾತಾಡಿಕೊಳ್ಳು ತ್ತಿದ್ದವು. ನಾಸರ್ ತನ್ನ ಕೈಯನ್ನು ಅವಳ ಕೈಯ ಮೇಲಿಟ್ಟ. ತಕ್ಷಣ ಇಬ್ಬರ ಬೆರಳುಗಳೂ ಬೆಸೆದುಕೊಂಡವು. ತಾಹಿರಾ ಕಣ್ಣು ಮುಚ್ಚಿ ಅವನ ಭುಜಕ್ಕೊರಗಿದಳು. ಅವನು ಅವಳ ಬೆರಳ ಹಿಡಿತವನ್ನು ಇನ್ನಷ್ಟು ಬಿಗಿಗೊಳಿಸಿದ. ಆ ಹಿಡಿತದಲ್ಲಿ ಪ್ರೀತಿಯಿತ್ತು. ಭರವಸೆಯಿತ್ತು. ಅಗಲಿಕೆಯ ನೋವಿತ್ತು. ಇಬ್ಬರ ಮುಂದೆಯೂ ಸಾವಿರ ಕನಸುಗಳ ಹೊಸ ಲೋಕವೊಂದು ತೆರೆದುಕೊಂಡಿತ್ತು. ಬಸ್ಸು ನಿಲ್ದಾಣ ಬಂತು. ಇಬ್ಬರೂ ಇಳಿದರು. ಅವಳು ಬಸ್ಸೇರಿ ಕುಳಿತಳು. ಬಸ್ಸು ಹೊರಟಿತು. ಆತ ಕೈ ಬೀಸಿದ. ಇಬ್ಬರ ಕಣ್ಣುಗಳೂ ಮಾತನಾಡಿಕೊಂಡವು. ಇಬ್ಬರ ಹೃದಯಗಳೂ ಅಗಲಿಕೆಯ ನೋವಿನಿಂದ ಒದ್ದಾಡತೊಡಗಿದವು.
ಮನೆಗೆ ಮರಳಿದ ನಾಸರ್‌ಗೆ ಹುಚ್ಚು ಹಿಡಿದಂತಾ ಗಿತ್ತು. ಅವನು ಮನೆಯಿಂದ ಹೊರಟು ಬಸ್ಸು ನಿಲ್ದಾಣದ ವರೆಗೆ ತಾಹಿರಾಳ ಜೊತೆ ಒಂದೇ ಒಂದು ಮಾತೂ ಆಡಿರಲಿಲ್ಲ. ‘‘ಛೇ, ನಾನು ಅವಳೊಡನೆ ಮಾತನಾಡಬೇಕಿತ್ತು. ಅವಳು ಎಷ್ಟು ನೊಂದು ಕೊಳ್ಳುತ್ತಾಳೋ ಏನೋ’’ ಎಂದು ಚಡಪಡಿಸತೊಡಗಿದ. ಅಂದು ರಾತ್ರಿ ಇಡೀ ಅವನ ಮುಂದೆ ಬಿಳುಚಿದ ತಾಹಿರಾಳ ಮುಖವೇ ತಿರುಗುತ್ತಿತ್ತು.
ಬೆಳಗ್ಗೆ ಎದ್ದವನೇ ಯಾಕೋ ಬೇಸರವಾಗಿ ಆತ ಅಂದೇ ಹೊರಟು ನಿಂತಿದ್ದ. ಐಸುಗೆ ಆಶ್ಚರ್ಯವಾಗಿತ್ತು. ಆದರೂ ಅವಳು ಏನೂ ಕೇಳಲಿಲ್ಲ.
ನಾಸರ್ ಕೋಣೆಯಲ್ಲಿ ಅಮ್ಮನ ಕೈಹಿಡಿದು ತನ್ನ ಪಕ್ಕ ಕೂರಿಸಿಕೊಂಡ. ಐಸು ಏನು ಎಂಬಂತೆ ಮಗನ ಮುಖ ನೋಡಿದಳು.
‘‘ಅಮ್ಮ ನಾನೊಂದು ಮಾತು ಕೇಳುತ್ತೇನೆ ನಡೆಸಿಕೊಡುತ್ತೀಯಾ?’’ ನಾಸರ್‌ನ ಮಾತಿನಲ್ಲಿ ಬೇಡಿಕೆ ಇತ್ತು.
‘‘ಏನಪ್ಪಾ ಅದು?’’
‘‘ಅಮ್ಮ, ನಾನು ತಾಹಿರಾಳನ್ನು ಮದುವೆಯಾಗು ವುದಾದರೆ ನೀನು ಒಪ್ಪುತ್ತಿಯಾ?’’
ಐಸು ಉತ್ತರಿಸಲಿಲ್ಲ. ಅವಳ ಹೃದಯ ಸಂತೋಷ ದಿಂದ ಅರಳಿತು. ಜೊತೆಗೆ ಸಣ್ಣದೊಂದು ನೋವಿನ ಕಿಡಿ ಹೃದಯದಾಳದಲ್ಲಿ ಚುಚ್ಚತೊಡಗಿತು.
(ಗುರುವಾರದ ಸಂಚಿಕೆಗೆ)

share
ವಾರ್ತಾಭಾರತಿ
ವಾರ್ತಾಭಾರತಿ
Next Story
X