Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಸಮಾಜದ ಅರ್ಧಾಂಶ ಹೀಗಿದ್ದರೆ ನಮ್ಮ ಉದ್ಧಾರ...

ಸಮಾಜದ ಅರ್ಧಾಂಶ ಹೀಗಿದ್ದರೆ ನಮ್ಮ ಉದ್ಧಾರ ಹೇಗೆ ಸಾಧ್ಯ?

ಶಂಬೂಕಶಂಬೂಕ6 May 2025 10:30 AM IST
share
ಸಮಾಜದ ಅರ್ಧಾಂಶ ಹೀಗಿದ್ದರೆ ನಮ್ಮ ಉದ್ಧಾರ ಹೇಗೆ ಸಾಧ್ಯ?
ಭಾರತೀಯ ಸಮಾಜದಲ್ಲಿ ಮಹಿಳೆಯ ಮುಂದೆ, ನೇರವಾಗಿ ಆಕೆಯ ಅಸ್ತಿತ್ವಕ್ಕೇ ಸಂಬಂಧಿಸಿದ ಕಠಿಣ ಸವಾಲುಗಳ ಒಂದು ದೀರ್ಘ ಸರಮಾಲೆಯೇ ಇದೆ. ಆಕೆ ಈ ಲೋಕದಲ್ಲಿ ಕಣ್ಣು ತೆರೆಯುವ ಮುನ್ನ ಮಾತ್ರವಲ್ಲ, ತನ್ನ ತಾಯಿಯ ಗರ್ಭದಲ್ಲಿದ್ದಾಗಲೇ ಆಕೆಯನ್ನು ದಮನಿಸುವ ಶ್ರಮ ಆರಂಭವಾಗಿ ಬಿಡುತ್ತದೆ. 2011ರ ಜನಗಣತಿ ಪ್ರಕಾರ 6 ವರ್ಷಕ್ಕಿಂತ ಕೆಳಗಿನ ಭಾರತೀಯ ಮಕ್ಕಳಲ್ಲಿ ಗಂಡು ಮಕ್ಕಳಿಗೆ ಹೋಲಿಸಿದರೆ, ಹೆಣ್ಣುಮಕ್ಕಳ ಸಂಖ್ಯೆ ಕಳವಳಕಾರಿ ಮಟ್ಟದಲ್ಲಿ ಕಡಿಮೆ ಇದೆ. ಇಲ್ಲಿ 1,000 ಹುಡುಗರಿದ್ದರೆ, ಹುಡುಗಿಯರ ಸಂಖ್ಯೆ ಕೇವಲ 918. ಉಳಿದ ಆ ನಮ್ಮ 82 ಹೆಣ್ಣುಮಕ್ಕಳು ಎಲ್ಲಿಗೆ ಹೋದರು? ಇದು ಸಮಾಜದ ಜಿಜ್ಞಾಸೆ, ಸಂವಾದ ಮತ್ತು ಸಂಶೋಧನೆಗೆ ಯೋಗ್ಯ ವಿಷಯ.

ಮಹಿಳೆಯರನ್ನು ಪೂಜಿಸುವುದರಿಂದ, ಮಹಿಳೆಯನ್ನು ದೇವಿ, ದೇವತೆ ಎಂದೆಲ್ಲಾ ಕರೆಯುವುದರಿಂದ ಮಹಿಳೆಗೆ ಪ್ರಯೋಜನ ಆಗುವುದಿದ್ದರೆ, ಭಾರತೀಯ ಮಹಿಳೆ ಇಂದು ಜಗತ್ತಿನಲ್ಲೇ ಅತ್ಯಧಿಕ ಸಬಲ, ಸಂಪನ್ನ ಮತ್ತು ಸಾರ್ಥಕ್ಯದ ಸ್ಥಿತಿಯಲ್ಲಿರಬೇಕಿತ್ತು. ಆದರೆ ಅಗತ್ಯಬಿದ್ದಾಗ ಮಾತ್ರ ಔಪಚಾರಿಕವಾಗಿ ಮಹಿಳೆಯನ್ನು ‘ಅರ್ಧಾಂಗಿನಿ’ ಎಂದು ವರ್ಣಿಸಲಾಗುವ ನಮ್ಮ ಸಮಾಜದಲ್ಲಿ ನಿರ್ಣಾಯಕ ರಂಗಗಳಲ್ಲಿ ನಾವು ಮಹಿಳೆಯರ ಪ್ರಾತಿನಿಧ್ಯವನ್ನು ಶೇ. 50 ಎಂಬ ಹಸಿರು ಗೆರೆಯ ಹತ್ತಿರ ಕೂಡಾ ಸುಳಿಯಲು ಬಿಟ್ಟಿಲ್ಲ.

ಹಲವು ವಿಷಯಗಳಲ್ಲಿ ಭಾರತೀಯರ ಭಾಗ್ಯ ನಿರ್ಧರಿಸುವ ನಮ್ಮ ಲೋಕಸಭೆಯಲ್ಲೇ ಇಂದು ಮಹಿಳಾ ಪ್ರಾತಿನಿಧ್ಯ ಕೇವಲ 13.6ಕ್ಕೆ ಸೀಮಿತವಾಗಿದೆ. ರಾಜ್ಯ ಸಭೆಯಲ್ಲಿ ಅವರ ಪ್ರಾತಿನಿಧ್ಯವು ಅದಕ್ಕಿಂತಲೂ ಕಡಿಮೆ ಅಂದರೆ ಶೇ. 13 ಮಾತ್ರವಿದೆ. ಇದಕ್ಕೆ ಹೋಲಿಸಿದರೆ ಪಕ್ಕದ ಪಾಕಿಸ್ತಾನದಂತಹ ಹಿಂದುಳಿದ ದೇಶದ ಪಾರ್ಲಿಮೆಂಟಿನಲ್ಲಿ ಮಹಿಳೆಯರ ಪ್ರಾತಿನಿಧ್ಯ ಶೇ. 16 ಮತ್ತು ಬಾಂಗ್ಲಾದೇಶದಲ್ಲಿ ಶೇ. 20ರಷ್ಟಿದೆ. ಸ್ವೀಡನ್, ನಾರ್ವೆ ಮತ್ತು ದಕ್ಷಿಣ ಆಫ್ರಿಕಾದ ಸಂಸತ್ತುಗಳಲ್ಲಿ ಮಹಿಳೆಯರಿಗೆ ಸುಮಾರು 45ರಷ್ಟು ಪ್ರಾತಿನಿಧ್ಯವಿದೆ. ಅಂದರೆ ಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯ ನಿರಾಕರಿಸುವ ವಿಷಯದಲ್ಲಿ ನಾವು ‘ವಿಶ್ವಗುರು’ ಎಂಬ ಪ್ರತಿಷ್ಠಿತ ಪಟ್ಟದ ಹತ್ತಿರ ಇದ್ದೇವೆ.

ಭಾರತದ ರಾಜಕೀಯದಲ್ಲಿ ಮಹಿಳೆಯನ್ನು ಹತ್ತಿಕ್ಕುವ ಪ್ರಕ್ರಿಯೆ, ಆಕೆಯನ್ನು ಚುನಾವಣೆಯಲ್ಲಿ ಸೋಲಿಸುವುದಕ್ಕೆ ಸೀಮಿತವಾಗಿಲ್ಲ. ಅದಕ್ಕಿಂತ ಮುಂಚೆ, ಅಂದರೆ, ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ಅಭ್ಯರ್ಥಿಗಳನ್ನು ಆರಿಸುವ ಹಂತದಲ್ಲೇ ಮಹಿಳೆಯ ಪ್ರಾತಿನಿಧ್ಯವನ್ನು ಕ್ರೂರವಾಗಿ ಹತ್ತಿಕ್ಕಲಾಗುತ್ತದೆ. 2024ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ ಮಹಿಳಾ ಅಭ್ಯರ್ಥಿಗಳ ಪ್ರಮಾಣ ಕೇವಲ ಶೇ. 9.5. ಈ ಕುರಿತು ಮಹಿಳೆಯರು ಪ್ರಶ್ನೆ ಎತ್ತಿದರೆ ನಮ್ಮ ಪುಢಾರಿಗಳು, 1952ರಲ್ಲಿ ಮಹಿಳಾ ಪ್ರಾತಿನಿಧ್ಯವು 5ರಷ್ಟು ತಳಮಟ್ಟದಲ್ಲಿತ್ತು, ಈಗ ಪರಿಸ್ಥಿತಿ ತುಂಬಾ ಸುಧಾರಿಸಿದೆ ಎಂದಿತ್ಯಾದಿಯಾಗಿ ಕೆಲವು ಹಳಸಲು ಅಂಕೆ ಸಂಖ್ಯೆಗಳನ್ನು ಮುಂದಿಟ್ಟು ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡುತ್ತಾರೆ.

ದೇಶದ ವಿವಿಧ ರಾಜ್ಯಗಳ ವಿಧಾನಸಭೆಗಳಲ್ಲಿನ ಸ್ಥಿತಿ ನೋಡಿದರೆ ಅಲ್ಲೂ ಅವಕಾಶವಿರುವುದು ಕಳವಳಕ್ಕೇ ಹೊರತು ನೆಮ್ಮದಿಗಲ್ಲ. ರಾಜ್ಯಗಳ ಪೈಕಿ ಮಹಿಳೆಯರಿಗೆ ಅತ್ಯಧಿಕ ಪ್ರಾತಿನಿಧ್ಯ ಇರುವುದು ಛತ್ತೀಸ್‌ಗಡ ಅಸೆಂಬ್ಲಿಯಲ್ಲಿ. ಅದು ಕೂಡಾ ಶೇ. 18ಕ್ಕೆ ಸೀಮಿತ. ಅತ್ಯಂತ ಕಡಿಮೆ ಪ್ರಾತಿನಿಧ್ಯ ಇರುವುದು ಮಿರೆರಾಂನಲ್ಲಿ. ಅಲ್ಲಿನ ಅಸೆಂಬ್ಲಿಯಲ್ಲಿರುವುದು ಕೇವಲ ಒಬ್ಬ ಶಾಸಕಿ.

ಪಾರ್ಲಿಮೆಂಟ್ ಮತ್ತು ಅಸೆಂಬ್ಲಿಗಳನ್ನು ಬಿಟ್ಟು ಸರಕಾರಿ ಕಚೇರಿಗಳನ್ನು ನೋಡಿದರೆ ಅಲ್ಲಿಯ ಸ್ಥಿತಿ ಮತ್ತಷ್ಟು ಚಿಂತಾಜನಕವಾಗಿದೆ. 2011ರ ಜನಗಣತಿಯಿಂದ ತಿಳಿದ ಪ್ರಕಾರ ಆ ವೇಳೆ ಕೇಂದ್ರ ಸರಕಾರದ ನೌಕರಿಯಲ್ಲಿದ್ದವರ ಪೈಕಿ ಮಹಿಳೆಯರ ಪ್ರಮಾಣ ಶೇ. 11ಕ್ಕಿಂತ ಕಡಿಮೆ ಇತ್ತು. 2020ರ ಹೊತ್ತಿಗೆ ಈ ಪ್ರಮಾಣವು ಶೇ. 13ಕ್ಕೆ ತಲುಪಿತು. ಅಂದರೆ ಪ್ರಗತಿ ಆಮೆಗತಿಯಲ್ಲಿದೆ.

ಯುಪಿಎಸ್‌ಸಿಯ ಮೂಲಕ ಇತ್ತೀಚಿನ ವರ್ಷಗಳಲ್ಲಿ ಪ್ರತಿವರ್ಷ ಸುಮಾರು 180 ಐಎಎಸ್ ಅಧಿಕಾರಿಗಳ ನಿಯುಕ್ತಿ ನಡೆಯುತ್ತದೆ. 1951 ಮತ್ತು 2020ರ ನಡುವೆ ಸೇವೆಗೆ ಸೇರಿದ 11,569 ಐಎಎಸ್ ಅಧಿಕಾರಿಗಳ ಪೈಕಿ 1,527 ಮಂದಿ ಮಾತ್ರ ಮಹಿಳೆಯರಿದ್ದರು. ಆರಂಭಿಕ ವರ್ಷಗಳಲ್ಲಿ ಮಹಿಳಾ ಐಎಎಸ್ ಅಧಿಕಾರಿಗಳ ಪ್ರಮಾಣ ಶೇ. 5ರಷ್ಟಿರುತ್ತಿತ್ತು. 70ರ ದಶಕದಲ್ಲಿ ಈ ಕ್ಷೇತ್ರದಲ್ಲಿ ಮಹಿಳಾ ಪ್ರಾತಿನಿಧ್ಯ ಶೇ. 15ಕ್ಕೆ ಏರಿತು. ಈ ದೃಷ್ಟಿಯಿಂದ 2020ರಲ್ಲಿ ಈ ಪ್ರಮಾಣ ಶೇ. 50ರ ಆಸುಪಾಸಿನಲ್ಲಿರಬೇಕಿತ್ತು. ಆದರೆ ವಾಸ್ತವದಲ್ಲಿ, 2020ರಲ್ಲೂ ಮಹಿಳಾ ಐಎಎಸ್ ಅಧಿಕಾರಿಗಳ ಪ್ರಮಾಣ ಶೇ. 27 ಮೀರಿರಲಿಲ್ಲ. ಐಎಎಸ್ ಅಧಿಕಾರಿಗಳೇ ನಿರ್ವಹಿಸುವ ತುಂಬಾ ಉನ್ನತ ಮಟ್ಟದ ಹುದ್ದೆಗಳಲ್ಲಂತೂ ಮಹಿಳಾ ಪ್ರಾತಿನಿಧ್ಯ ಶೂನ್ಯಕ್ಕೆ ಸಮೀಪವಿದೆ.

ಖಾಸಗಿ ಕ್ಷೇತ್ರದೊಳಗೆ ಇಣುಕಿದರೆ, ಕಳೆದ ವರ್ಷದ ಮಾಹಿತಿ ಪ್ರಕಾರ ದೇಶದ 1,155 ಪ್ರಮುಖ ಖಾಸಗಿ ಕಂಪೆನಿಗಳಲ್ಲಿ ಕೆಲಸ ಮಾಡುವ ಸುಮಾರು 77 ಲಕ್ಷ ಉದ್ಯೋಗಿಗಳಲ್ಲಿ ಶೇ. 23 ಮಂದಿ ಮಹಿಳೆಯರು. ಈ ಕಂಪೆನಿಗಳಲ್ಲಿರುವ 540 ಪ್ರಮುಖ ಮೆನೇಜ್ಮೆಂಟ್ ಹುದ್ದೆಗಳಲ್ಲಿ ಮಹಿಳೆಯರ ಪ್ರಾತಿನಿಧ್ಯ ಕೇವಲ ಶೇ. 13.

ಭಾರತೀಯ ಸಮಾಜದಲ್ಲಿ ಮಹಿಳೆಯ ಮುಂದೆ, ನೇರವಾಗಿ ಆಕೆಯ ಅಸ್ತಿತ್ವಕ್ಕೇ ಸಂಬಂಧಿಸಿದ ಕಠಿಣ ಸವಾಲುಗಳ ಒಂದು ದೀರ್ಘ ಸರಮಾಲೆಯೇ ಇದೆ. ಆಕೆ ಈ ಲೋಕದಲ್ಲಿ ಕಣ್ಣು ತೆರೆಯುವ ಮುನ್ನ ಮಾತ್ರವಲ್ಲ, ತನ್ನ ತಾಯಿಯ ಗರ್ಭದಲ್ಲಿದ್ದಾಗಲೇ ಆಕೆಯನ್ನು ದಮನಿಸುವ ಶ್ರಮ ಆರಂಭವಾಗಿ ಬಿಡುತ್ತದೆ. 2011ರ ಜನಗಣತಿ ಪ್ರಕಾರ 6 ವರ್ಷಕ್ಕಿಂತ ಕೆಳಗಿನ ಭಾರತೀಯ ಮಕ್ಕಳಲ್ಲಿ ಗಂಡು ಮಕ್ಕಳಿಗೆ ಹೋಲಿಸಿದರೆ, ಹೆಣ್ಣುಮಕ್ಕಳ ಸಂಖ್ಯೆ ಕಳವಳಕಾರಿ ಮಟ್ಟದಲ್ಲಿ ಕಡಿಮೆ ಇದೆ. ಇಲ್ಲಿ 1,000 ಹುಡುಗರಿದ್ದರೆ, ಹುಡುಗಿಯರ ಸಂಖ್ಯೆ ಕೇವಲ 918. ಉಳಿದ ಆ ನಮ್ಮ 82 ಹೆಣ್ಣುಮಕ್ಕಳು ಎಲ್ಲಿಗೆ ಹೋದರು? ಇದು ಸಮಾಜದ ಜಿಜ್ಞಾಸೆ, ಸಂವಾದ ಮತ್ತು ಸಂಶೋಧನೆಗೆ ಯೋಗ್ಯ ವಿಷಯ. ಪ್ರಕೃತಿ ತನ್ನದೇ ವಿಧಾನದಿಂದ ಜಗತ್ತಿನಲ್ಲಿ ಜನಿಸುವ ಗಂಡು ಮತ್ತು ಹೆಣ್ಣುಗಳ ಸಂಖ್ಯೆಯ ನಡುವೆ ಒಂದು ಸಂತುಲಿತ ಅನುಪಾತವನ್ನು ಸದಾ ಕಾಯ್ದುಕೊಂಡು ಬಂದಿದೆ. ಆದರೆ ಬೇರೆಲ್ಲ ವಿಷಯಗಳಲ್ಲಿ ಪ್ರಕೃತಿಯ ಜೊತೆ ಚೆಲ್ಲಾಟ ನಡೆಸಿರುವ ಮಾನವರು ಈ ವಿಷಯದಲ್ಲೂ ಅಪರಾಧಿ ಹಸ್ತಕ್ಷೇಪ ನಡೆಸಿ ಪ್ರಾಕೃತಿಕ ಸಮತೋಲನವನ್ನು ಹದಗೆಡಿಸಿದ್ದಾರೆ.

‘ಲಾನ್ಸೆಟ್ ಜರ್ನಲ್’ನಲ್ಲಿ 2018ರಲ್ಲಿ ಪ್ರಕಟವಾದ ಅಧ್ಯಯನವೊಂದರ ಪ್ರಕಾರ ಭಾರತದಲ್ಲಿ ಪ್ರತಿವರ್ಷ 5 ವರ್ಷ ವಯಸ್ಸಾಗುವ ಮುನ್ನ ಸಾಯುವ ಮಕ್ಕಳಲ್ಲಿ ಗಂಡು ಮಕ್ಕಳ ಸಂಖ್ಯೆಗೆ ಹೋಲಿಸಿದರೆ, ಸುಮಾರು 2.4 ಲಕ್ಷಕ್ಕೂ ಹೆಚ್ಚು ಮಂದಿ ಹೆಣ್ಣು ಮಕ್ಕಳು ಸಾವನ್ನಪ್ಪಿರುತ್ತಾರೆ. ಅಧಿಕೃತ ಸರಕಾರಿ ದಾಖಲೆಗಳನ್ನಾಧರಿಸಿ ನಡೆಸಲಾದ ಲೆಕ್ಕಾಚಾರವೊಂದರ ಪ್ರಕಾರ ಕಾಲಕಳೆದಂತೆ ಈ ಅಂತರ ಕಡಿಮೆಯಾಗುವ ಬದಲು ಹೆಚ್ಚುತ್ತಲೇ ಹೋಗುತ್ತಿದೆ. 2013ರಲ್ಲಿ 1,000 ಪುರುಷರೆದುರು 909 ಮಹಿಳೆಯರಿದ್ದರೆ, 2013-2015ರ ಸಾಲಲ್ಲಿ ಈ ಪ್ರಮಾಣ 900ಕ್ಕೆ ಕುಸಿಯಿತು. 2015-17 ಸಾಲಲ್ಲಿ ಇದು ಇನ್ನಷ್ಟು ಕುಸಿದು 896ಕ್ಕೆ ಇಳಿಯಿತು. ಹರ್ಯಾಣ ರಾಜ್ಯದಲ್ಲಂತೂ ಈ ಅನುಪಾತವು 1,000 ಪುರುಷರೆದುರು ಕೇವಲ 831 ಮಹಿಳೆಯರು ಎಂಬಷ್ಟು ಕಳವಳಕಾರಿ ಮಟ್ಟವನ್ನು ತಲುಪಿತ್ತು.

ಭಾರತದ ಕೇಂದ್ರ ಸರಕಾರದಿಂದ ಪ್ರಕಟಿತ ಅಂಕೆ-ಸಂಖ್ಯೆಗಳ ಆಧಾರದಲ್ಲಿ Pew ಸಂಶೋಧನಾ ಸಂಸ್ಥೆಯವರು ತಯಾರಿಸಿದ ವರದಿಯ ಪ್ರಕಾರ ಭಾರತದಲ್ಲಿ ಪ್ರತಿವರ್ಷ, ಮಗು ಗರ್ಭದೊಳಗಿರುವಾಗಲೇ ಗಂಡೋ ಹೆಣ್ಣೋ ಎಂಬುದನ್ನು ಗುರುತಿಸಿ, ಹೆಣ್ಣಾಗಿದ್ದರೆ ಆ ಹಂತದಲ್ಲೇ ಸಾಯಿಸಿ ಬಿಡುವವರು ಗಣನೀಯ ಸಂಖ್ಯೆಯಲ್ಲಿದ್ದಾರೆ.

ಈ ರೀತಿ ದೊಡ್ಡ ಸಂಖ್ಯೆಯಲ್ಲಿ ಹೆಣ್ಣು ಮಕ್ಕಳು, ತೀರಾ ಆರಂಭದ ವರ್ಷಗಳಲ್ಲೇ ಸಾವಿಗೀಡಾಗುವುದಕ್ಕೆ ಅಥವಾ ಗರ್ಭದಲ್ಲೇ ಕಣ್ಮರೆಯಾಗುವುದಕ್ಕೆ ಹಲವಾರು ಆರ್ಥಿಕ, ಸಾಮಾಜಿಕ, ಧಾರ್ಮಿಕ ಹಾಗೂ ಸಾಂಪ್ರದಾಯಿಕ ಕಾರಣಗಳಿವೆ. ಉದಾ: ಪುರುಷ ಪ್ರಧಾನ ಸಂಸ್ಕೃತಿ, ಪರಂಪರಾಗತ ಪುರುಷ ವೈಭವೀಕರಣ, ಎಲ್ಲ ಧಾರ್ಮಿಕ ಆಚರಣೆಗಳಲ್ಲಿ ಮತ್ತು ಪಿತ್ರಾರ್ಜಿತ ಆಸ್ತಿ ವಿತರಣೆಯಲ್ಲಿ ಪುರುಷರಿಗೆ ಪ್ರಾಶಸ್ತ್ಯ, ವೇತನದಲ್ಲಿ ತಾರತಮ್ಯ, ವರದಕ್ಷಿಣೆ, ಹೆಣ್ಣಿನಿಂದಾಗಿ ಖರ್ಚು ಹೆಚ್ಚುತ್ತದೆಯೇ ಹೊರತು ಆದಾಯ ಹೆಚ್ಚುವುದಿಲ್ಲ ಎಂಬ ನಂಬಿಕೆ, ಹೆಣ್ಣು ಮತ್ತು ಹೆಣ್ಣಿನ ಮನೆಯವರು ವಿವಿಧ ಸಂದರ್ಭಗಳಲ್ಲಿ ಎದುರಿಸಬೇಕಾಗುವ ಅಪಮಾನ, ಅಗೌರವ, ಅಪಹಾಸ್ಯ.... ಇತ್ಯಾದಿ.

ಭಾರತದಲ್ಲಿ ಮಹಿಳೆಯರ ವಿರುದ್ಧ ನಡೆಯುವ ಅಪರಾಧಗಳ ಅಸಾಮಾನ್ಯ ಪ್ರಮಾಣದಂತೆ ಅವುಗಳ ವೈವಿಧ್ಯಪೂರ್ಣ ಸ್ವರೂಪ ಕೂಡಾ ಆಘಾತಕಾರಿಯಾಗಿದೆ. ನಮ್ಮ ದೇಶದಲ್ಲಿ 2022ರಲ್ಲಿ ಮಹಿಳೆಯರ ವಿರುದ್ಧ ಅಪರಾಧದ 4,45,256 ಪ್ರಕರಣಗಳು ದಾಖಲಾದವು. ಅಂದರೆ ಪ್ರತೀ ಗಂಟೆಗೆ ಸುಮಾರು 51 ಎಫ್‌ಐಆರ್‌ಗಳು! ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೊ (NCRB)ದವರ 2014ರ ದಾಖಲೆಗೆ ಹೋಲಿಸಿದರೆ 2022ರಲ್ಲಿ ಮಹಿಳೆಯರ ವಿರುದ್ಧ ಅಪರಾಧ ಪ್ರಕರಣಗಳಲ್ಲಿ ಶೇ. 31 ಹೆಚ್ಚಳವಾಗಿದೆ. 2021ರಲ್ಲಿ ನಡೆದ ಪ್ರಕರಣಗಳನ್ನು 2011ರಲ್ಲಿದ್ದ ಪರಿಸ್ಥಿತಿಗೆ ಹೋಲಿಸಿದರೆ ಮಹಿಳೆಯರ ವಿರುದ್ಧ ಅಪರಾಧ ಪ್ರಕರಣಗಳಲ್ಲಿ ಶೇ. 87 ವೃದ್ಧಿಯಾಗಿತ್ತು. ಒಟ್ಟು ಪ್ರಕರಣಗಳ ಪೈಕಿ ನಿರ್ದಿಷ್ಟ ಪ್ರಕಾರದ ಪ್ರಕರಣಗಳ ಸಂಖ್ಯೆ ಇಲ್ಲಿದೆ:

ಪತಿ ಅಥವಾ ಆತನ ಸಂಬಂಧಿಕರಿಂದ ದೌರ್ಜನ್ಯ - 1.4 ಲಕ್ಷ.

ಅಪಹರಣ 85 ಸಾವಿರ, ಮಾನಹಾನಿಗೆ ಯತ್ನ - 83 ಸಾವಿರ.

ಅತ್ಯಾಚಾರ - 31,611 (ಅಂದರೆ ಪ್ರತಿದಿನ ಸರಾಸರಿ 86 ಪ್ರಕರಣಗಳು).

ವರದಕ್ಷಿಣೆ ಸಂಬಂಧಿ ಸಾವುಗಳು - 6,589.

ವರದಕ್ಷಿಣೆಗಾಗಿ ಕಿರುಕುಳ - 13,479.

‘ಮೇಕ್ ಲವ್ ನಾಟ್ ಸ್ಕಾರ್’ ಸಂಸ್ಥೆಯವರ ಪ್ರಕಾರ ಭಾರತದಲ್ಲಿ ಮಹಿಳೆಯರ ಮೇಲೆ ಆ್ಯಸಿಡ್ ಎಸೆಯುವ 200ರಿಂದ 300 ಪ್ರಕರಣಗಳು ಪ್ರತಿವರ್ಷ ಅಧಿಕೃತವಾಗಿ ದಾಖಲಾಗುತ್ತವೆ. ಆದರೆ ಇಂತಹ ಪ್ರಕರಣಗಳ ನೈಜ ವಾರ್ಷಿಕ ಸಂಖ್ಯೆ 1,000ದ ಆಸುಪಾಸಿನಲ್ಲಿದೆ. ಇದಲ್ಲದೆ ಮಹಿಳೆಯರ ಕಳ್ಳ ಸಾಗಣೆ, ಮಹಿಳೆಯರ ವಿರುದ್ಧ ಸೈಬರ್ ಅಪರಾಧಗಳು, ಉದ್ಯೋಗದ ಸ್ಥಳದಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ಮತ್ತಿತರ ಸ್ವರೂಪದ ಅಪರಾಧಗಳೂ ಗಣನೀಯ ಪ್ರಮಾಣದಲ್ಲಿ ನಡೆಯುತ್ತಿವೆ.

ಅಧಿಕೃತ ಮೂಲಗಳ ಪ್ರಕಾರ, ದೇಶದಲ್ಲಿ ಹೊಟ್ಟೆಪಾಡಿಗಾಗಿ ಮೈಮಾರುವ ದಂಧೆಯನ್ನು ಅವಲಂಬಿಸಿರುವ ಅಸಹಾಯಕ ಮಹಿಳೆಯರ ಸಂಖ್ಯೆ 8 ಲಕ್ಷಕ್ಕಿಂತ ಅಧಿಕವಿದೆ. ಆದರೆ ಹಲವು ಖಾಸಗಿ ಸೇವಾ ಸಂಸ್ಥೆಗಳು ಮತ್ತು ಜಾಗತಿಕ ಸ್ತರದ ವಿಶ್ವಾಸಾರ್ಹ ಮೂಲಗಳ ಪ್ರಕಾರ ಭಾರತದಲ್ಲಿ ವೇಶ್ಯಾವೃತ್ತಿಯನ್ನು ಅವಲಂಬಿಸಿರುವ ಮಹಿಳೆಯರ ನೈಜ ಸಂಖ್ಯೆ ಇದಕ್ಕಿಂತ ಹತ್ತಾರು ಪಟ್ಟು ಅಧಿಕವಿದೆ. ಉದಾ: ಅಂತರ್‌ರಾಷ್ಟ್ರೀಯ ಕಾರ್ಮಿಕ ಸಂಘಟನೆ (ILO) ತನ್ನ 2021ರ ವರದಿಯಲ್ಲಿ ತಿಳಿಸಿರುವಂತೆ ಭಾರತದಲ್ಲಿ ಸುಮಾರು 80 ಲಕ್ಷ ಹೆಣ್ಣುಮಕ್ಕಳು ಈ ವೃತ್ತಿಯಲ್ಲಿದ್ದಾರೆ. ಅವರಲ್ಲಿ ಬಹುತೇಕ ಶೇ. 50 ಮಂದಿ ಅಪ್ರಾಪ್ತ ವಯಸ್ಕರು. ರೈಟರ್ಸ್ (Reuters) ಸಂಸ್ಥೆಯವರು 2019ರಲ್ಲಿ ಪ್ರಕಟಿಸಿದ ಒಂದು ಅಧ್ಯಯನದ ಪ್ರಕಾರ ಭಾರತದಲ್ಲಿ ಈ ದಂಧೆಯಲ್ಲಿರುವ ಹೆಣ್ಣು ಮಕ್ಕಳ ಸಂಖ್ಯೆ ಸುಮಾರು ಎರಡು ಕೋಟಿಯಷ್ಟಿದೆ. ಅವರಲ್ಲಿ 1.6 ಕೋಟಿಯಷ್ಟು ಮಹಿಳೆಯರನ್ನು ಅವರ ಇಚ್ಛೆಗೆ ವಿರುದ್ಧವಾಗಿ ವಂಚನೆ, ಅಪಹರಣ, ಬ್ಲ್ಯಾಕ್‌ಮೇಲ್ ಮುಂತಾದ ವಿಧಾನಗಳಿಂದ ಈ ದಂಧೆಗೆ ತಳ್ಳಲಾಗಿರುತ್ತದೆ.

ಬಾಲ್ಯ ವಿವಾಹ, ವಿಶೇಷವಾಗಿ ಹೆಣ್ಮಕ್ಕಳ ಬಾಲ್ಯ ವಿವಾಹವು ಸದ್ಯ ಭಾರತದ ಮುಂದಿರುವ ದೊಡ್ಡ ಸವಾಲುಗಳಲ್ಲಿ ಒಂದು. ಭಾರತದಲ್ಲಿ 18 ವರ್ಷ ಪೂರ್ತಿಯಾಗುವ ಮುನ್ನ ಹೆಣ್ಣಿನ ವಿವಾಹ ಕಾನೂನು ಬಾಹಿರವಾಗಿದೆ. ಆದರೂ ಅಪ್ರಾಪ್ತ ವಯಸ್ಸಿನ ಹೆಣ್ಣುಮಕ್ಕಳ ವಿವಾಹದ ವಿಷಯದಲ್ಲಿ ಭಾರತವು ಜಗತ್ತಿನ ಬೇರೆಲ್ಲ ದೇಶಗಳಿಗಿಂತ ಮುಂದಿದೆ. ಇಂದು ಭಾರತದಲ್ಲಿ ವಿವಾಹವಾಗುವ ಹೆಣ್ಣುಮಕ್ಕಳ ಪೈಕಿ ಶೇ. 23 ಮಂದಿ ತಮಗೆ 18 ವರ್ಷ ತುಂಬುವ ಮುನ್ನವೇ ಮದುವೆಯಾಗಿರುತ್ತಾರೆ. ಅವರ ಸಂಖ್ಯೆ 22.24 ಕೋಟಿಗಿಂತ ಅಧಿಕವಿದೆ. ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಈ ವ್ಯಾಧಿ ತುಂಬಾ ವ್ಯಾಪಕವಾಗಿದೆ. ಆ ಪೈಕಿ ಶೇ. 5 ಹೆಣ್ಣುಮಕ್ಕಳು ತಮಗೆ 15 ವರ್ಷ ವಯಸ್ಸಾಗುವ ಮುನ್ನವೇ ಮದುವೆಯಾಗಿರುತ್ತಾರೆ. ಇದೆಲ್ಲ ಆ ಹೆಣ್ಣು ಮಕ್ಕಳ ಸ್ವಇಚ್ಛೆಯಿಂದೇನೂ ಆಗುವುದಲ್ಲ. ಈ ಹೆಣ್ಣು ಮಕ್ಕಳು ಶಾರೀರಿಕ ಹಾಗೂ ಮಾನಸಿಕವಾಗಿ ವಿವಾಹದಂತಹ ಗುರುತರ ಹೊಣೆಗಾರಿಕೆಯನ್ನು ಹೊರುವುದಕ್ಕೆ ಸನ್ನದ್ಧರಾಗುವ ಮುನ್ನವೇ ಅವರ ಕುಟುಂಬ ಮತ್ತು ಸಮಾಜವು ಅವರನ್ನು ಆ ವಲಯಕ್ಕೆ ತಳ್ಳಿ ಬಿಡುತ್ತದೆ.

ಇದಲ್ಲದೆ ಭಾರತೀಯ ಮಹಿಳೆಯರಲ್ಲಿ ಮದ್ಯ, ಮಾದಕದ್ರವ್ಯ ಇತ್ಯಾದಿ ಚಟಗಳಿಗೆ ಬಲಿಯಾಗುತ್ತಿರುವ ಮಹಿಳೆಯರು ಗಣನೀಯ ಸಂಖ್ಯೆಯಲ್ಲಿದ್ದಾರೆ. ಅವರ ಸಂಖ್ಯೆ ಹೆಚ್ಚುತ್ತಲೂ ಇದೆ. ದೇಶದ 14 ಪ್ರಮುಖ ನಗರಗಳನ್ನು ಗುರಿಯಾಗಿಸಿ ನಡೆಸಲಾದ ಸಮೀಕ್ಷೆಯೊಂದರಿಂದ ತಿಳಿದು ಬಂದಂತೆ, ಈ ನಗರಗಳಲ್ಲಿನ ಶೇ. 7.9ರಷ್ಟು ಮಹಿಳೆಯರು ತಾವು ಮದ್ಯವನ್ನು ಅಥವಾ ಅಫೀಮ್‌ನಂತಹ ಮಾದಕ ಪದಾರ್ಥಗಳನ್ನು ಬಳಸುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ.

ದೇಶದಲ್ಲಿ ಸುಮಾರು 24 ಲಕ್ಷದಷ್ಟು ಎಚ್‌ಐವಿ ಸೋಂಕು ಪೀಡಿತರಿದ್ದಾರೆ. ಅವರಲ್ಲಿ 9.3 ಲಕ್ಷ ಮಂದಿ (ಶೇ.39) ಮಹಿಳೆಯರು.

ಇವೆಲ್ಲಾ ಮಹಿಳೆಯರ ಬಗ್ಗೆ ನೈಜ ಕಳಕಳಿ ಉಳ್ಳವರೆಲ್ಲಾ ಗಂಭೀರವಾಗಿ ಆತ್ಮಾವಲೋಕನ ನಡೆಸಬೇಕಾದ, ವ್ಯಾಪಕವಾಗಿ ಚರ್ಚಿಸಬೇಕಾದ, ಸಂಘಟಿತ, ಸಾಮೂಹಿಕ ಹೋರಾಟಕ್ಕೆ ಅರ್ಹವಾದ ವಿಷಯಗಳು.

share
ಶಂಬೂಕ
ಶಂಬೂಕ
Next Story
X