Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಬಿಜೆಪಿಗೆ ಪಾಠ ಕಲಿಸಿದ ಚುನಾವಣಾ ಫಲಿತಾಂಶ

ಬಿಜೆಪಿಗೆ ಪಾಠ ಕಲಿಸಿದ ಚುನಾವಣಾ ಫಲಿತಾಂಶ

ಹೊನಕೆರೆ ನಂಜುಂಡೇಗೌಡಹೊನಕೆರೆ ನಂಜುಂಡೇಗೌಡ5 Jun 2024 12:17 PM IST
share
ಬಿಜೆಪಿಗೆ ಪಾಠ ಕಲಿಸಿದ ಚುನಾವಣಾ ಫಲಿತಾಂಶ
ಚುನಾವಣೆಯಲ್ಲಿ ದೇಶದ ಸಂವಿಧಾನವೇ ಗೆದ್ದಿದೆ. ಪ್ರಜಾಪ್ರಭುತ್ವ ವಿಜಯದ ನಗೆ ಬೀರಿದೆ. ‘ಬಿಜೆಪಿ 400ಕ್ಕೂ ಹೆಚ್ಚು ಸ್ಥಾನ ಗೆದ್ದರೆ ಸಂವಿಧಾನ ಬದಲು ಮಾಡಬಹುದು. ಸರ್ವಾಧಿಕಾರಕ್ಕೆ ದಾರಿ ಮಾಡಿಕೊಡಬಹುದು. ‘ಹಿಂದುತ್ವ’ ರಾಜಕಾರಣ ವಿಜೃಂಭಿಸಬಹುದು. ಅಲ್ಪಸಂಖ್ಯಾತ ಮುಸ್ಲಿಮರ ಬದುಕು ದುಸ್ತರವಾಗಬಹುದು’ ಎಂಬ ಭೀತಿಯನ್ನು ಮತದಾರರು ನಿವಾರಿಸಿದ್ದಾರೆ. ‘ಸಂವಿಧಾನ ಮುಟ್ಟಲು ಸಾಧ್ಯವಿಲ್ಲ. ದೇಶದ ವೈವಿಧ್ಯತೆ ನಾಶಮಾಡಲು ಆಗುವುದಿಲ್ಲ’ ಎಂಬ ಸಂದೇಶವನ್ನು ಫಲಿತಾಂಶ ರವಾನಿಸಿದೆ.

ಜೂನ್ 1ರಂದು ಲೋಕಸಭೆ ಚುನಾವಣೆ ಸಮೀಕ್ಷೆ ಪ್ರಕಟವಾದಾಗ ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳ ಬೆಂಬಲಿಗರು ಸಂಭ್ರಮಿಸಿದ್ದರು. ಬರೀ ಮೂರೇ ದಿನದಲ್ಲಿ ಸಂಭ್ರಮ ಕೊನೆಗೊಂಡಿದೆ. ‘ಬಿಜೆಪಿ ಮತ್ತು ಮಿತ್ರ ಪಕ್ಷಗಳು ಹೆಚ್ಚು ಸ್ಥಾನ ಗೆಲ್ಲಲಿವೆ’ ಎಂಬ ಮತಗಟ್ಟೆ ಸಮೀಕ್ಷೆಗಳ ಭವಿಷ್ಯ ಹುಸಿಯಾಗಿದೆ. ಎನ್‌ಡಿಎ 300ರ ಗಡಿಗೆ ಬಂದು ನಿಂತಿದ್ದರೂ, ಹೊಸ ಸರಕಾರ ರಚನೆ ಆಗುವವರೆಗೆ ಏನು ಬೇಕಾದರೂ ಆಗಬಹುದು ಎಂಬ ವಾತಾವರಣ ಸೃಷ್ಟಿಯಾಗಿದೆ.

ಲೋಕಸಭೆ ಒಟ್ಟು ಸ್ಥಾನಗಳು 543. ದಿಲ್ಲಿಯಲ್ಲಿ ಗೆದ್ದುಗೆ ಹಿಡಿಯಲು 272 ಸ್ಥಾನ ಬೇಕು. ಬಿಜೆಪಿ ಏಕಾಂಗಿಯಾಗಿ ಅಧಿಕಾರಕ್ಕೆ ಹಿಡಿಯಲು ಸಾಧ್ಯವಿಲ್ಲ. ‘ಅಬ್‌ಕಿ ಬಾರ್ 400 ಪಾರ್’ ಎಂಬ ಘೋಷಣೆ ‘ಇಂಡಿಯಾ’ ಮೈತ್ರಿಕೂಟದ ಬಿರುಗಾಳಿಗೆ ಸಿಕ್ಕಿ ಧೂಳೀಪಟವಾಗಿದೆ. ಎನ್‌ಡಿಎ ಮಿತ್ರ ಪಕ್ಷಗಳು ಅತೀ ಹೆಚ್ಚು ಸ್ಥಾನಗಳನ್ನು ಪಡೆದಿದ್ದರೂ ನೈತಿಕವಾಗಿ ಸೋತಿವೆ. ಕಾಂಗ್ರೆಸ್ ಮತ್ತು ಮಿತ್ರಪಕ್ಷಗಳ ಮೈತ್ರಿಕೂಟ ಅಧಿಕಾರದ ಹತ್ತಿರಕ್ಕೆ ಬರಲು ವಿಫಲವಾಗಿದ್ದರೂ ನೈತಿಕವಾಗಿ ಗೆದ್ದಿವೆ.

ಚುನಾವಣೆಯಲ್ಲಿ ದೇಶದ ಸಂವಿಧಾನವೇ ಗೆದ್ದಿದೆ. ಪ್ರಜಾಪ್ರಭುತ್ವ ವಿಜಯದ ನಗೆ ಬೀರಿದೆ. ‘ಬಿಜೆಪಿ 400ಕ್ಕೂ ಹೆಚ್ಚು ಸ್ಥಾನ ಗೆದ್ದರೆ ಸಂವಿಧಾನ ಬದಲು ಮಾಡಬಹುದು. ಸರ್ವಾಧಿಕಾರಕ್ಕೆ ದಾರಿ ಮಾಡಿಕೊಡಬಹುದು. ‘ಹಿಂದುತ್ವ’ ರಾಜಕಾರಣ ವಿಜೃಂಭಿಸಬಹುದು. ಅಲ್ಪಸಂಖ್ಯಾತ ಮುಸ್ಲಿಮರ ಬದುಕು ದುಸ್ತರವಾಗಬಹುದು’ ಎಂಬ ಭೀತಿಯನ್ನು ಮತದಾರರು ನಿವಾರಿಸಿದ್ದಾರೆ. ‘ಸಂವಿಧಾನ ಮುಟ್ಟಲು ಸಾಧ್ಯವಿಲ್ಲ. ದೇಶದ ವೈವಿಧ್ಯತೆ ನಾಶಮಾಡಲು ಆಗುವುದಿಲ್ಲ’ ಎಂಬ ಸಂದೇಶವನ್ನು ಫಲಿತಾಂಶ ರವಾನಿಸಿದೆ.

ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ಮುಗಿದ ತಕ್ಷಣ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ನಾಯಕರಲ್ಲಿ ಒಂದು ರೀತಿ ಆತಂಕ ಶುರುವಾಯಿತು. ಬಳಿಕ, ಪ್ರಚಾರದ ವರಸೆಯೇ ಬದಲಾಯಿತು. 10 ವರ್ಷಗಳಲ್ಲಿ ಹುಸಿ ಭರವಸೆಗಳಿಂದ ಜನರನ್ನು ನಿರಾಶೆಗೊಳಿಸಿದ್ದ ಮೋದಿ ಬಾಯಿಗೆ ಬಂದಂತೆ ಬಡಬಡಿಸಿದರು. ‘‘ಕಾಂಗ್ರೆಸ್ ನೇತೃತ್ವದ ‘ಇಂಡಿಯಾ’ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಹಿಂದೂ ಮಹಿಳೆಯರ ಮಂಗಳ ಸೂತ್ರಗಳನ್ನು ಮುಸ್ಲಿಮರು ಕಿತ್ತೊಯ್ಯಲಿದ್ದಾರೆ. ಕರ್ನಾಟಕದಂತೆ ಇತರ ಹಿಂದುಳಿದ ವರ್ಗಗಳ (ಒಬಿಸಿ) ಮೀಸಲಾತಿ ಕಸಿದು ಮುಸ್ಲಿಮರಿಗೆ ಕೊಡಲಾಗುತ್ತದೆ’’ ಎಂದು ಹೇಳಿದ್ದರು. ಅವರ ಹಸೀ ಸುಳ್ಳುಗಳನ್ನು ಮತದಾರರು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ.

‘ಚುನಾವಣಾ ಫಲಿತಾಂಶ ನರೇಂದ್ರ ಮೋದಿ ಅವರ ನಾಯಕತ್ವಕ್ಕೆ ಕುತ್ತಾಗಲಿದೆಯೇ?’ ಎಂಬ ಬಲವಾದ ಅನುಮಾನ ತಲೆದೋರಿದೆ. ಮೋದಿ ಅವರ ನಾಯಕತ್ವ ಬದಲಿಸಿ, ನಿತಿನ್ ಗಡ್ಕರಿ, ರಾಜನಾಥ್ ಸಿಂಗ್ ಅಥವಾ ಬೇರೆ ನಾಯಕರನ್ನು ಸಂಸದೀಯ ನಾಯಕನ ಸ್ಥಾನಕ್ಕೆ ಚುನಾಯಿಸುವ ಸಾಧ್ಯತೆಯಿದೆ ಎಂಬ ಮಾತುಗಳು ಈಗಾಗಲೇ ಬಿಜೆಪಿ ಪಾಳೆಯದಲ್ಲಿ ಕೇಳಿ ಬರುತ್ತಿವೆ.

ಕಳೆದ ಹತ್ತು ವರ್ಷಗಳಿಂದ ಮೋದಿ ಪ್ರಶ್ನಾತೀತ ನಾಯಕರಾಗಿದ್ದರು. ಈಗ ಪರಿಸ್ಥಿತಿ ಬದಲಾಗಿದೆ. 56 ಇಂಚಿನ ನಾಯಕನ ಎದೆ ಕುಗ್ಗಿದೆ. 2014ರಲ್ಲಿ ಮೊದಲ ಸಲ ಆಡಳಿತ ಚುಕ್ಕಾಣಿ ಹಿಡಿಯುವ ಮುನ್ನ ದೇಶದ ಅಭಿವೃದ್ಧಿಯ ದಿಕ್ಕನ್ನೇ ಬದಲಿಸುವ ಭರವಸೆಯನ್ನು ಮೋದಿ ನೀಡಿದ್ದರು. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುವ ಆಶ್ವಾಸನೆ ನೀಡಿದ್ದರು. ರೈತರ ಆದಾಯ ದ್ವಿಗುಣಗೊಳಿಸುವ ವಾಗ್ದಾನ ಮಾಡಿದ್ದರು. ಅದ್ಯಾವುದೂ ಈಡೇರಲಿಲ್ಲ. ಬದಲಿಗೆ, ದೇಶದ ಆರ್ಥಿಕ ಸ್ಥಿತಿ ಕುಸಿಯಿತು. ಹಸಿವು, ಬಡತನ, ನಿರುದ್ಯೋಗ ಹೆಚ್ಚಾಯಿತು. ಬೆಲೆ ಏರಿಕೆ ನಿಯಂತ್ರಣ ತಪ್ಪಿತು. ಇವೆಲ್ಲದರ ಒಟ್ಟಾರೆ ಪರಿಣಾಮ ಎಂಬಂತೆ ಚುನಾವಣೆ ಫಲಿತಾಂಶ ಪ್ರಕಟವಾಗಿದೆ.

ಅತಿಯಾದ ಆತ್ಮ ವಿಶ್ವಾಸದಿಂದ ಬೀಗುತ್ತಿದ್ದ ಬಿಜೆಪಿ ಎಡವಿದೆ. ಎಲ್ಲಿ ಎಡವಿದೆ ಎಂದು ಅವಲೋಕಿಸಿದರೆ ಪ್ರಮುಖವಾಗಿ ಕಾಣುವುದು ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಹಾಗೂ ಮಹಾರಾಷ್ಟ್ರ. ಈ ರಾಜ್ಯಗಳ ಜತೆ ಹರ್ಯಾಣ, ಪಂಜಾಬ್, ರಾಜಸ್ಥಾನವೂ ಕೈ ಜೋಡಿಸಿವೆ. ಉತ್ತರ ಪ್ರದೇಶದಲ್ಲಿ ಇರುವುದು 80 ಕ್ಷೇತ್ರ. ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷವು ಕಾಂಗ್ರೆಸ್ ಮೈತ್ರಿಯೊಂದಿಗೆ 40 ಕ್ಷೇತ್ರಗಳನ್ನು (ಸಮಾಜವಾದಿ ಪಕ್ಷ 34, ಕಾಂಗ್ರೆಸ್ 6) ಗೆದ್ದಿದೆ. ದೇಶದ ರಾಜಕಾರಣದಲ್ಲಿ ಉತ್ತರ ಪ್ರದೇಶದ್ದು ಅತ್ಯಂತ ನಿರ್ಣಾಯಕ ಪಾತ್ರ. 2014ರಲ್ಲಿ 71 ಮತ್ತು 2019ರಲ್ಲಿ 62 ಸ್ಥಾನಗಳನ್ನು ಬಾಚಿಕೊಂಡಿದ್ದ ಬಿಜೆಪಿ ದೊಡ್ಡ ಹಿನ್ನಡೆ ಅನುಭವಿಸಿದೆ. 2004ರಲ್ಲಿ ಸಮಾಜವಾದಿ ಪಕ್ಷ 35 ಸ್ಥಾನ ಗೆದ್ದಿತ್ತು. ಈ ಫಲಿತಾಂಶ ಈಗ ಪುನರಾವರ್ತನೆಯಾಗಿದ್ದು, ಅಖಿಲೇಶ್ ರಾಷ್ಟ್ರ ರಾಜಕಾರಣದ ‘ಹೀರೊ’ ಆಗಿ ಹೊರಹೊಮ್ಮಿದ್ದಾರೆ.

ಉತ್ತರ ಪ್ರದೇಶದಲ್ಲಿ ಮುಸ್ಲಿಮರು- ಯಾದವರು- ಇತರ ಹಿಂದುಳಿದ ವರ್ಗ ಹಾಗೂ ದಲಿತರ ಜಾತಿ ಸಮೀಕರಣ ಅಖಿಲೇಶ್ ಯಾದವ್ ಅವರ ಕೈ ಹಿಡಿದಂತಿದೆ. ಈ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ನಾಯಕ ಎಚ್ಚರಿಕೆಯ ಹೆಜ್ಜೆಗಳನ್ನು ಇಟ್ಟಿದ್ದರು. ಆದರೆ, ಬಿಹಾರದಲ್ಲಿ ಇದೇ ತರಹದ ಪ್ರಯೋಗ ನಡೆಸಲು ರಾಷ್ಟ್ರೀಯ ಜನತಾದಳದ ಮುಖಂಡ ತೇಜಸ್ವಿ ಯಾದವ್ ವಿಫಲರಾಗಿದ್ದಾರೆ. ಉತ್ತಮ ಸಾಧನೆ ತೋರಲು ಆರ್‌ಜೆಡಿ ಹಾಗೂ ಕಾಂಗ್ರೆಸ್ ಸೋತಿದೆ. ಒಟ್ಟು 40 ಸ್ಥಾನಗಳಲ್ಲಿ 9 ಸ್ಥಾನಗಳನ್ನಷ್ಟೇ ಗೆಲ್ಲಲು ಮೈತ್ರಿಕೂಟಕ್ಕೆ ಸಾಧ್ಯವಾಗಿದೆ. ಇದರಲ್ಲಿ ಆರ್‌ಜೆಡಿ 4, ಕಾಂಗ್ರೆಸ್ 3 ಮತ್ತು ಸಿಪಿಐ (ಎಂಎಲ್) (ಎಲ್) ಎರಡು ಸ್ಥಾನ ಪಡೆದಿವೆ. ಎನ್‌ಡಿಎ ಮಿತ್ರ ಪಕ್ಷಗಳಾದ ಬಿಜೆಪಿ, ಜೆಡಿಯು ತಲಾ 12 ಸ್ಥಾನಗಳನ್ನು ಗೆದ್ದಿದೆ. ಚಿರಾಗ್ ಪಾಸ್ವಾನ್ ಅವರ ಪಕ್ಷ ಐದು ಸ್ಥಾನ ಪಡೆದಿವೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಎದ್ದೇಳಲು ಸಾಧ್ಯವಾಗದಂತೆ ಮುಗ್ಗರಿಸಿದೆ. ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ 29 ಸ್ಥಾನಗಳನ್ನು ಗೆದ್ದುಕೊಂಡಿದೆ. ಕಾಂಗ್ರೆಸ್ ಬರೀ 1 ಸ್ಥಾನದಲ್ಲಿ ಜಯಿಸಿದೆ. ಬಿಜೆಪಿ 12 ಸ್ಥಾನಗಳನ್ನು ಪಡೆದಿದೆ. 2019ರಲ್ಲಿ 18 ಕ್ಷೇತ್ರಗಳನ್ನು ಗಳಿಸಿತ್ತು. ಮಮತಾ ಅವರ ಹೋರಾಟವನ್ನು ದೇಶದ ಜನ ಮೆಚ್ಚಲೇಬೇಕು. ಅವರದ್ದು ಏಕಾಂಗಿ ಹೋರಾಟ.

ಪಂಜಾಬ್‌ನಲ್ಲಿ ಕಾಂಗ್ರೆಸ್ ಮತ್ತು ಅರವಿಂದ ಕೇಜ್ರಿವಾಲ್ ನೇತೃತ್ವದ ಎಎಪಿ ಪ್ರಾಬಲ್ಯ ಮೆರೆದಿವೆ. ದಿಲ್ಲಿ, ಮಧ್ಯ ಪ್ರದೇಶ, ಛತ್ತೀಸ್‌ಗಡ, ಹಿಮಾಚಲ, ಗುಜರಾತ್, ಜಾರ್ಖಂಡ್ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಕಾಂಗ್ರೆಸ್ ಹೀನಾಯ ಸೋಲು ಅನುಭವಿಸಿದೆ. ಮಧ್ಯ ಪ್ರದೇಶದಲ್ಲಿ ಕಾಂಗ್ರೆಸ್ ನಾಯಕತ್ವ ಕುರಿತು ವರಿಷ್ಠರು ಚಿಂತಿಸಬೇಕಾದ ಅಗತ್ಯವಿದೆ. ದಿಲ್ಲಿಯ ಜನ ಮೈತ್ರಿಕೂಟಕ್ಕೆ ಕೈ ಕೊಟ್ಟಿದ್ದು ಏಕೆ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕಿದೆ.

ಸದ್ಯದ ಚುನಾವಣಾ ಫಲಿತಾಂಶದಿಂದ ಇಂಡಿಯಾ ಮೈತ್ರಿ ಕೂಟದಲ್ಲಿ ಉತ್ಸಾಹ ಇಮ್ಮಡಿಗೊಂಡಿದೆ. ಈಗಾಗಲೇ ಆಂಧ್ರದಲ್ಲಿ ಅತೀ ಹೆಚ್ಚು ಸ್ಥಾನ ಪಡೆದಿರುವ ತೆಲುಗು ದೇಶಂ ಪಕ್ಷದ ಮುಖಂಡ ಚಂದ್ರಬಾಬು ನಾಯ್ಡು ಮತ್ತು ಬಿಹಾರದ ಜೆಡಿಯು ಮುಖಂಡ ನಿತೀಶ್ ಕುಮಾರ್ ಅವರನ್ನು ಸಂಪರ್ಕಿಸುವ ಪ್ರಯತ್ನ ನಡೆಯುತ್ತಿದೆ. ಈ ಇಬ್ಬರೂ ನಾಯಕರನ್ನು ಎನ್‌ಡಿಎ ತೆಕ್ಕೆಯಿಂದ ಹೊರತರುವ ಪ್ರಯತ್ನ ನಡೆಯುತ್ತಿದೆ. ಮೋದಿ ಈಗಾಗಲೇ ನಾಯ್ಡು ಅವರನ್ನು ಸಂಪರ್ಕಿಸಿದ್ದಾರೆ.

ಲೋಕಸಭೆ ಚುನಾವಣೆ ಫಲಿತಾಂಶ ಬಿಜೆಪಿಗೆ ಪಾಠ ಕಲಿಸಿದೆ. ರಾಮನ ನೆಲದಲ್ಲೇ ಮತದಾರರು ಈ ಪಕ್ಷವನ್ನು ತಿರಸ್ಕರಿಸಿದ್ದಾರೆ. ಅಯೋಧ್ಯೆಯಲ್ಲೇ ಹಿನ್ನಡೆ ಆಗಿದೆ. ‘ಇನ್ನು ಮುಂದೆ ರಾಮನ ಜಪ, ಹಿಂದುತ್ವದ ಮಂತ್ರ ನಡೆಯುವುದಿಲ್ಲ’ ಎಂದು ಮತದಾರರು ತೋರಿಸಿಕೊಟ್ಟಿದ್ದಾರೆ. ಕಾಂಗ್ರೆಸ್ ಪಕ್ಷದ ಪುನಶ್ಚೇತನಕ್ಕೆ ದಾರಿ ಮಾಡಿದೆ. ಈ ಅವಕಾಶವನ್ನು ಕಾಂಗ್ರೆಸ್ ಅದರಲ್ಲೂ ರಾಹುಲ್ ಗಾಂಧಿ ಸಮರ್ಥವಾಗಿ ಬಳಸಿಕೊಳ್ಳುವರೇ ಎಂಬುದನ್ನು ಕಾಲವೇ ನಿರ್ಧರಿಸಲಿದೆ.

share
ಹೊನಕೆರೆ ನಂಜುಂಡೇಗೌಡ
ಹೊನಕೆರೆ ನಂಜುಂಡೇಗೌಡ
Next Story
X