ವಿಟ್ಲ | ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಚರಂಡಿಗೆ ಉರುಳಿದ ಕಾರು

ವಿಟ್ಲ, ಜೂ.1 : ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಚರಂಡಿಗೆ ಪಲ್ಟಿಯಾದ ಘಟನೆ ವಿಟ್ಲ ಪುತ್ತೂರು ರಸ್ತೆಯ ಅಳಕೆಮಜಲು ತಿರುವಿನಲ್ಲಿ ಶನಿವಾರ ತಡರಾತ್ರಿ ಸಂಭವಿಸಿದೆ.
ಕಾರು ಪಲ್ಟಿಯಾಗಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದಿದ್ದು ಕಂಬಕ್ಕೂ ಕಾರಿಗೂ ಹಾನಿಯಾಗಿದೆ. ಕಾರಿನಲ್ಲಿದ್ದವರು ಗ್ಲಾಸ್ ಒಡೆದು ಹೊರಬಂದಿರುವಂತೆ ಕಂಡುಬರುತ್ತಿದೆ. ಕಾರಿನಲ್ಲಿದ್ದವರ ವಿವರ ತಿಳಿದುಬಂದಿಲ್ಲ.
Next Story