ಸೆ.17 ರಿಂದ ಹೊನ್ನಕಟ್ಟೆ- ಕಾನಾ ಮೇಲ್ಸೇತುವೆಯಲ್ಲಿ ವಾಹನಗಳ ಸಂಚಾರ ನಿಷೇಧ

ಮಂಗಳೂರು, ಸೆ.16:ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ಹೊನ್ನಕಟ್ಟೆ -ಕಾನಾ ರಸ್ತೆಯ ರೈಲ್ವೆ ಮೇಲ್ಸೇತುವೆಯಲ್ಲಿ ಕಾಂಕ್ರೀಟೀಕರಣ ಕೈಗೆತ್ತಿಕೊಳ್ಳುತ್ತಿರುವ ಹಿನ್ನಲೆಯಲ್ಲಿ ಸೇತುವೆಯಲ್ಲಿ ಎಲ್ಲಾ ರೀತಿಯ ವಾಹನ ಸಂಚಾರವನ್ನು ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 16 ರವರೆಗೆ ಒಟ್ಟು 30 ದಿನಗಳ ಕಾಲ ಸಂಪೂರ್ಣ ನಿಷೇಧಿಸಲಾಗಿದೆ.
ಈ ಅವಧಿಯಲ್ಲಿ ವಾಹನಗಳು ಮಂಗಳೂರಿನಿಂದ ಕುಳಾಯಿ ಹೊನ್ನಕಟ್ಟೆ ಮೂಲಕ ಎಂಆರ್‌ಪಿಎಲ್ ಕಡೆಗೆ ಸಂಚರಿ ಸುವ ವಾಹನಗಳು ಹೊಸಬೆಟ್ಟು- ಸುರತ್ಕಲ್ ಜಂಕ್ಷನ್ ಮುಖಾಂತರವಾಗಿ ಎಂಆರ್‌ಪಿಎಲ್ ಕಡೆಗೆ ಸಂಚರಿಸುವಂತೆ ಸೂಚಸಲಾಗಿದೆ.
ಎಂಆರ್‌ಪಿಎಲ್‌ನಿಂದ ಮಂಗಳೂರು ಕಡೆಗೆ ಸಂಚರಿಸುವ ವಾಹನಗಳು ಎಂಆರ್‌ಪಿಎಲ್ - ಸುರತ್ಕಲ್ ಜಂಕ್ಷನ್‌ಗೆ ಬಂದು ಎನ್‌ಎಚ್- 66 ಸರ್ವಿಸ್ ರಸ್ತೆಯಲ್ಲಿ ಗೋವಿಂದಾಸ್ ಮುಖಾಂತರ ಮಂಗಳೂರು ಕಡೆಗೆ ಸಂಚರಿಸಬೇಕು, ಸುರತ್ಕಲ್-ಗೋವಿಂದದಾಸ್ ಸರ್ವಿಸ್ ರಸ್ತೆಯಲ್ಲಿ ವಾಹನಗಳ ನಿಲುಗಡೆ ನಿಷೆೇಧಿಸಲಾಗಿದೆ.
ಸುರತ್ಕಲ್-ಗೋವಿಂದದಾಸ್ ಸರ್ವಿಸ್ ರಸ್ತೆಯಲ್ಲಿ ಏಕಮುಖ ಸಂಚಾರಕ್ಕೆ ಅನುವು ಮಾಡಿಕೊಡುವ ಸಲುವಾಗಿ ಗೋವಿಂದದಾಸ್ ಕಡೆಯಿಂದ ಸುರತ್ಕಲ್ ಕಡೆ ಸರ್ವಿಸ್ ರಸ್ತೆಯಲ್ಲಿ ವಾಹನ ಸಂಚಾರಗಳ ನಿಷೇಧಿಸಿದೆ.
ಸಂಚಾರ ದಟ್ಟನೆ ಸಮಯದಲ್ಲಿ ಎಂಆರ್‌ಪಿಎಲ್, ಎಚ್‌ಪಿಎಸ್‌ಎಲ್, ಬಿಎಎಸ್‌ಎಫ್ ಹಾಗೂ ಇತರ ಕಂಪನಿಗಳ ವಾಹನಗಳು ಸುರತ್ಕಲ್-ಗೋವಿಂದದಾಸ್ ಸರ್ವಿಸ್ ರಸ್ತೆಯಲ್ಲಿ ಬಾರದಂತೆ ನಿಷೆೇಧಿಸಿದೆ. (ಬೆಳಗ್ಗೆ 8 ರಿಂದ 9 ಗಂಟೆ, ಸಂಜೆ 4 ರಿಂದ 6 ಗಂಟೆ)
ವಾಹನ ಸವಾರರು ಮತ್ತು ಸಾರ್ವಜನಿಕರು ಈ ಬದಲಾವಣೆಗಳನ್ನು ಗಮನಿಸಿ ಸಹಕರಿಸಬೇಕು. ನಿಗದಿತ ಅವಧಿ ಯಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತದೆ ಎಂದು ಮಂಗಳೂರು ಮಹಾನಗರಪಾಲಿಕೆ ಆಯುಕ್ತ ಪ್ರಕಟನೆಯಲ್ಲಿ ತಿಳಿಸಿದ್ದಾರೆ.