ರಾಜಕೀಯ ಬಿಟ್ಟು ಎಲ್ಲರೂ ಒಟ್ಟಾಗಿ ವಿಟ್ಲವನ್ನು ಅಭಿವೃದ್ಧಿಪಡಿಸುವ: ಶಾಸಕ ಅಶೋಕ್ ರೈ

ವಿಟ್ಲ: ಪಟ್ಟಣ ಪಂಚಾಯಿತಿ ಭಾಗದಲ್ಲಿ ಶುದ್ದ ಕುಡಿಯುವ ನೀರ ಯೋಜನೆಯನ್ನು ಮನೆ ಮನೆಗೆ ತಲುಪಿಸುವ ನಿಟ್ಟಿನಲ್ಲಿ 70 ಕೋಟಿಯ ಯೋಜನೆಗೆ ಡಿಪಿಆರ್ ಮಾಡಿದರೆ, ಬಜೆಟ್ ನಲ್ಲಿ ಅನುದಾನ ಕೊಡಿಸುವ ಪ್ರಯತ್ನ ಮಾಡಲಾಗುವುದು. ಶುದ್ದಿ ಕುಡಿಯುವ ನೀರಿಗಾಗಿ ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಬಹುಗ್ರಾಮದಲ್ಲಿ 100ಕೋಟಿ ಅನುದಾನ ಮೀಸಲು ಇಡಲಾಗಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ವಿಟ್ಲ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಕುಡಿಯುವ ನೀರಿನ ಯೋಜನೆಯ ಬಗ್ಗೆ ನಡೆದ ಸಭೆಯಲ್ಲಿ ಮಾತನಾಡಿದರು.
ಅಗ್ನಿಶಾಮಕ ಘಟಕ್ಕೆ ವಿಟ್ಲದಲ್ಲಿ 1.4ಎಕರೆ ಜಾಗ ನಿಗದಿ ಪಡಿಸಲಾಗಿದೆ. ನಗರ ಬೆಳೆಯುವ ಕಾರಣ ಒಳಚರಂಡಿಗೆ ಆದ್ಯತೆ ನೀಡಬೇಕು. 10 ಎಕರೆ ಕ್ರೀಡಾಂಗಣಕ್ಕೆ ನಿಗದಿ ಮಾಡುವ ನಿಟ್ಟಿನಲ್ಲಿ ನಿರ್ಣಯ ಮಾಡಬೇಕು. ಕುಡಿಯುವ ನೀರಿನ ಯೋಜನೆಗೆ ಅರಣ್ಯ ಇಲಾಖೆಯ ಜಾಗ ಬಳಸಿಕೊಳ್ಳುವ ಹಿನ್ನಲೆ ಇಲಾಖೆಗೆ ಬೇರೆ ಜಾಗವನ್ನು ನಿಗದಿಪಡಿಸ ಲಾಗಿದೆ. ಅಧಿಕಾರಿಗಳು ಅಡ್ಡಿಪಡಿಸದರೆ ತಿಳಿಸಿ ಸೂಕ್ತ ರೀತಿಯಲ್ಲಿ ಸೂಚಿಸಲಾಗುವುದು ಎಂದರು
ಕೆಯು ಡಬ್ಲ್ಯು ಎಸ್ ಎಸ್ ಆಂಡ್ ಡಿ. ಬಿ. ಕಾರ್ಯಪಾಲಕ ಇಂಜಿನಿಯರ್ ಅಜಯ್ ಮಾತನಾಡಿ ಪಟ್ಟಣ ವ್ಯಾಪ್ತಿಯಲ್ಲಿ 3.5ಲಕ್ಷ ನೀರಿನ ಬೇಡಿಕೆಯಿದ್ದು, ನಗರೋತ್ಥಾನ ಮೂಲಕ 5ಲಕ್ಷ ಲೀಟರ್ ಟ್ಯಾಂಕ್ ಹಾಗೂ ಬಹುಗ್ರಾಮ ಯೋಜನೆಯ ಮೂಲಕ 3.1ಲಕ್ಷ ಲೀಟರ್ ಟ್ಯಾಂಕ್ ನಿರ್ಮಾಣವಾಗಿದೆ. ವಿಟ್ಲದಲ್ಲಿ 5ಸಾವಿರಕ್ಕೂ ಅಧಿಕ ಮನೆಯಿದ್ದು, ಸದ್ಯ 2500 ಮನೆಗೆ ಮಾತ್ರ ನೀರಿನ ಸಂಪರ್ಕವಿದೆ. 8ಲಕ್ಷ ಲೀಟರ್ ಟ್ಯಾಂಕ್ ನಿರ್ಮಾಣದ ಜತೆಗೆ ಸಂಪೂರ್ಣ ಹೊಸ ಪೈಪ್ ಲೈನ್, ಮೀಟರ್ ಅಳವಡಿಕೆಗೆ ಅಗತ್ಯ ಅನುದಾನದ ಲೆಕ್ಕಾಚರ ಮಾಡಬೇಕಾಗಿದೆ ಎಂಡರು.
ಪಟ್ಟಣ ಪಂಚಾಯಿತಿ ಅಧ್ಯಕ್ಷ ಕರುಣಾಕರ ನಾಯ್ತೊಟ್ಟು, ಸ್ಥಾಯಿ ಸಮಿತಿ ಅಧ್ಯಕ್ಷ ರವಿಪ್ರಕಾಶ್ ಎಸ್., ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕರುಣಾಕರ ವಿ., ಗ್ರಾಮೀಣ ಕುಡಿಯುವ ನೀರಿನ ಯೋಜನೆಯ ಇಂಜಿನಿಯರ್ ನಟೇಶ್, ಪಟ್ಟಣ ಪಂಚಾಯಿತಿ ಇಂಜಿನಿಯರ್ ಡೊಮಿನಿಕ್ ಡೆಮೆಲ್ಲೊ ಮತ್ತಿತರರು ಉಪಸ್ಥಿತರಿದ್ದರು.